ಸೀತಾಮರ್ಹಿ (ಬಿಹಾರ): ಮಕ್ಕಳು ಎಂದರೆ ತಾಯಿಗೆ ಎಲ್ಲಿಲ್ಲದ ಪ್ರೀಯಿ ಇರುತ್ತದೆ. ತನಗೆ ಒಂದು ತುತ್ತು ಊಟ ಕಡಿಮೆಯಾದರೂ ಚಿಂತೆ ಇಲ್ಲ. ಆದರೆ, ತನ್ನ ಮಕ್ಕಳು ಹಸಿವಿನಿಂದ ನರಳ ಬಾರದು ಎಂದು ತಾಯಿ ಬಯಸುತ್ತಾಳೆ. ಹಾಗೆ ಮಕ್ಕಳು ಕೂಡ ತಾಯಿಯನ್ನು ಅತಿಹೆಚ್ಚು ಪ್ರೀತಿಸುತ್ತಾರೆ. ಆದರೆ, ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಹೃಯದಹೀನ ತಾಯಿ ವರ್ತನೆಯಿಂದ ಬೇಸತ್ತ ಪುಟ್ಟ ಮಗನೊಬ್ಬ ಅಳುತ್ತಲೇ ಪೊಲೀಸ್ ಠಾಣೆಯವರೆಗೆ ಬಂದಿದ್ದಾನೆ.
ಹೌದು, ನನ್ನ ತಾಯಿ ನಾನು ಕೇಳಿದಾಗ ಊಟ ಹಾಕುವುದಿಲ್ಲ. ಊಟ ಕೇಳಲು ಹೋದಾಗ ನನಗೆ ಥಳಿಸುತ್ತಾರೆ. ಸರಿಯಾದ ಸಮಯಕ್ಕೆ ಅಡುಗೆ ಮಾಡುವುದಿಲ್ಲ. ಅಡುಗೆ ಮಾಡು ಎಂದು ಕೇಳಿದರೂ ಅಡುಗೆ ಮಾಡುವುದಿಲ್ಲ. ಅಷ್ಟೇ ಅಲ್ಲ, ಮನೆಯ ಇತರ ಸದಸ್ಯರಿಗೂ ಅಡುಗೆ ಮಾಡಲು ಬಿಡುವುದಿಲ್ಲ. ಯಾರಾದರೂ ಅಡುಗೆ ಮಾಡಿದರೆ, ಅವರಿಗೂ ಹೊಡೆಯುತ್ತಾಳೆ ಎಂದು ಎಂಟು ವರ್ಷದ ಬಾಲಕ ತಾಯಿ ವಿರುದ್ಧದ ದೂರಿನೊಂದಿಗೆ ಸೀತಾಮರ್ಹಿ ನಗರ ಠಾಣೆಗೆ ಬಂದಿದ್ದಾನೆ. ಈ ಬಾಲಕ ಕಣ್ಣೀರು ಸುರಿಸುತ್ತಾ ತನ್ನ ಅಳಲನ್ನು ಪೊಲೀಸರಿಗೆ ವಿವರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.