ಗೋಪಾಲ್‌ಗಂಜ್: ಮಕ್ಕಳು ಎಂದ ಮೇಲೆ ಹಠ, ರೋಷ, ಜಿದ್ದು ಸಹಜ. ಆದರೆ ಇಲ್ಲೊಬ್ಬ ಬಾಲಕನ ಹಠವೂ ತಂದೆ-ತಾಯಿಗೆ ಅಷ್ಟೇ ಅಲ್ಲದೇ ಇಡೀ ನಗರಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ಉಡಾಳ್ ಮಗನ ಕಾಟಕ್ಕೆ ಬೇಸತ್ತ ಪೋಷಕರು ಹೌದು, ಇಲ್ಲಿನ ಯಾದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿಕಪುರ ಗ್ರಾಮದ ನಿವಾಸಿ ಕಪಿಲ್ ದೇವ್ ಯಾದವ್ ಅವರ ಪುತ್ರ ಅಜಿತ್ ಕುಮಾರ್ 2ನೇ ತರಗತಿ ವಿದ್ಯಾರ್ಥಿ. ಚಿಕ್ಕ ವಯಸ್ಸಿನಲ್ಲೇ ಅಜಿತ್ ವಿಪರೀತ ಹಠಮಾರಿಯಾಗಿ ಬೆಳೆದಿದ್ದಾನೆ. ಹೀಗಾಗಿ ಈತನ ಪೋಷಕರು ಇಲ್ಲಿನ ಬಂಜಾರಿ ರಸ್ತೆಯಲ್ಲಿರುವ ಜ್ಞಾನಲೋಕ್ ಹಾಸ್ಟೆಲ್‌ಗೆ ಸೇರಿಸಿದ್ದರು.
ಅಷ್ಟಕ್ಕೂ ನಡೆದಿದ್ದೇನು?:ಹಾಸ್ಟೆಲ್ ಸೇರಿಸುವುದರಿಂದ ಮಗ ಸುಧಾರಿಸಿಕೊಳ್ಳುತ್ತಾನೆ ಮತ್ತು ದಬ್ಬಾಳಿಕೆ ಬಿಟ್ಟು ಅಧ್ಯಯನದತ್ತ ಗಮನ ಹರಿಸುತ್ತಾನೆ ಎಂಬ ಕಲ್ಪನೆ ಪಾಲಕರದ್ದಾಗಿತ್ತು. ಈ ನಡುವೆ ಮಂಗಳವಾರ ಮಗುವಿನ ತಾಯಿ ಮತ್ತು ಚಿಕ್ಕಮ್ಮ ಮಗನನ್ನು ಭೇಟಿಯಾಗಲು ಹಾಸ್ಟೆಲ್‌ಗೆ ಬಂದಿದ್ದರು. ತಾಯಿ ಮತ್ತು ಚಿಕ್ಕಮ್ಮ ಮಗನಿಗೆ ಮಾರುಕಟ್ಟೆಗೆ ಹೋಗಿ ಬರುತ್ತೇನೆ ಅಂತಾ ಹೇಳಿದರು. ಈ ವೇಳೆ ಅಜಿತ್ ನಾನು ಬರುವುದಾಗಿ ಹೇಳಿದ್ದಾನೆ. ಮಾರುಕಟ್ಟೆಗೆ ಕರೆದೊಯ್ದರೇ ಮತ್ತೆ ಮನೆಗೆ ಬರುವುದಾಗಿ ಹಠ ಮಾಡುತ್ತಾನೆ ಎಂದು ತಿಳಿದ ತಾಯಿ ಅವನನ್ನು ಹಾಸ್ಟೆಲ್ನಲ್ಲೇ ಬಿಟ್ಟು ಹೋಗಲು ನಿರ್ಧರಿಸಿದ್ದರು.
ಓದಿ:ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ಸ್ಫೋಟದ ಎಫೆಕ್ಟ್: 500 ನಿವಾಸಿಗಳ ಸ್ಥಳಾಂತರ!
ಮುಂದೇನಾಯ್ತು:ಆದ್ರೆ ಅಜಿತ್ ‘ನೀವು ನನ್ನನ್ನು ಸಹ ಮಾರುಕಟ್ಟೆ ಕರೆದುಕೊಂಡು ಹೋಗದಿದ್ದಲ್ಲಿ ನಾನು ಕಟ್ಟಡದ ಮೇಲಿಂದ ಜಿಗಿಯುತ್ತೇನೆ’ ಎಂದು ಪೋಷಕರಿಗೆ ಆವಾಜ್ ಹಾಕಿದ್ದಾನೆ. ಇವನ ಹಠ ಇದ್ದಿದ್ದೇ ಎಂದು ತಿಳಿದು ತಾಯಿ ಮತ್ತು ಚಿಕ್ಕಮ್ಮ ಆತನನ್ನು ಹಾಸ್ಟೆಲ್ನಲ್ಲೇ ಬಿಟ್ಟು ಮಾರುಕಟ್ಟೆ ಕಡೆ ಪ್ರಯಾಣ ಬೆಳೆಸಿದ್ದರು.
ಪೋಷಕರು ಹಾಸ್ಟೆಲ್‌ನಿಂದ ಹೊರಬಂದ ತಕ್ಷಣ ಅಜಿತ್ ಛಾವಣಿ ಮೇಲಕ್ಕೆ ಹೋಗಿ ಜಿಗಿಯಲು ಯತ್ನಿಸಿದ್ದಾನೆ. ಈ ವೇಳೆ, ಬಾಲಕ ಕೆಳಗೆ ಬಿಳುತ್ತಾನೆ ಎಂದು ನಗರದ ಜನ ಒಟ್ಟಿಗೆ ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಬ್ ಇನ್ಸ್ಪೆಕ್ಟರ್ ರಾಜೇಶ್ ಕುಮಾರ್ ನೇತೃತ್ವದ ರಕ್ಷಣಾ ತಂಡ ಸ್ಥಳಕ್ಕೆ ದೌಡಾಯಿಸಿ ಕಿಟಕಿಯ ಸಹಾಯದಿಂದ ವಿದ್ಯಾರ್ಥಿಯನ್ನು ರಕ್ಷಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದಾಗ ಮಗು ಇದಕ್ಕೂ ಮುನ್ನ ಹಲವು ಬಾರಿ ಕಿಡಿಗೇಡಿ ಕೃತ್ಯ ಎಸಗಿರುವುದು ಪತ್ತೆಯಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಬಾಲಕನನ್ನು ರಕ್ಷಿಸಿದ ಬಳಿಕ ಮನೆಗೆ ಕರೆದುಕೊಂಡು ಹೋಗಲು ಆತನ ತಾಯಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಟಿವಿ ಭಾರತ್ ಮನವಿ: ತಮ್ಮ ಮಗು ಓದುವ ಮತ್ತು ಬರೆಯುವ ಮೂಲಕ ಏನಾದರೂ ಉತ್ತಮ ಸಾಧನೆ ಮಾಡಬೇಕೆಂಬುದು ಪ್ರತಿಯೊಬ್ಬ ಪೋಷಕರ ಕನಸು. ಪಾಲಕರು ಮಗುವಿನ ಭವಿಷ್ಯವನ್ನು ಸುಧಾರಿಸಲು ಹಗಲಿರುಳು ಶ್ರಮಿಸುತ್ತಾರೆ, ಮಕ್ಕಳು ಸಹ ಕಷ್ಟಪಟ್ಟು ಶ್ರದ್ಧೆಯಿಂದ ಓದಬೇಕು. ಅಂತಹ ಕೃತ್ಯವನ್ನು ಮಾಡಬೇಡಿ ಎಂದು ETV ಇಂಡಿಯಾ ನಿಮ್ಮನ್ನು ಒತ್ತಾಯಿಸುತ್ತದೆ.