ಕರ್ನಾಟಕ

karnataka

By

Published : Jun 27, 2023, 10:27 AM IST

ETV Bharat / bharat

AIC Recruitment: ಭಾರತೀಯ ಕೃಷಿ ವಿಮಾ ಕಂಪನಿಯಲ್ಲಿ ಮ್ಯಾನೇಜ್​ಮೆಂಟ್​ ಟ್ರೈನಿ ಹುದ್ದೆ: ಮಾಸಿಕ 60 ಸಾವಿರ ರೂ ವೇತನ

ಅಗ್ರಿಕಲ್ಚರ್​​ ಇನ್ಸುರೆನ್ಸ್​​ ಕಂಪನಿ ಆಫ್​ ಇಂಡಿಯಾ ಅಥವಾ ಭಾರತೀಯ ಕೃಷಿ ವಿಮಾ ಕಂಪನಿಯು ಜೀವೇತರ ವಿಮಾ ವಲಯವಾಗಿದೆ. ಭಾರತ ಸರ್ಕಾರದ ಅಡಿ ಇದು ಕಾರ್ಯ ನಿರ್ವಹಿಸಲಿದೆ.

Central Government Jobs Management Trainee Post in Agriculture Insurance Company of India
Central Government Jobs Management Trainee Post in Agriculture Insurance Company of India

ಭಾರತ ಸರ್ಕಾರದ ಅಗ್ರಿಕಲ್ಚರ್​​ ಇನ್ಸುರೆನ್ಸ್​​ ಕಂಪನಿ ಆಫ್​ ಇಂಡಿಯಾ ಲಿಮಿಟೆಡ್​ (ಎಐಸಿ)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಸಮುದಾಯಗಳಿಗೆ ಬೆಳೆಗಳಿಗೆ ವಿಮೆ ನೀಡುವ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಯನ್ನು ಆನ್​ಲೈನ್​ ಮೂಲಕ ಅಭ್ಯರ್ಥಿಗಳು ಮಾಡಬಹುದಾಗಿದೆ.

ಅಧಿಸೂಚನೆ

ಹುದ್ದೆ ವಿವರ:ಎಐಸಿಯಲ್ಲಿ 30 ಮ್ಯಾನೇಜ್​​ಮೆಂಟ್​ ಟ್ರೈನಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳ ನೇಮಕಾತಿ ಭಾರತಾದ್ಯಂತ ನಡೆಯಲಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗ್ರಿಕಲ್ಚರ್​​ ಮಾರ್ಕೆಟಿಂಗ್​/ ಅಗ್ರಿಕಲ್ಚರ್​​ ಮಾರ್ಕೆಟಿಂಗ್​ ಅಂಡ್​ ಕೊ ಆಪರೇಷನ್​/ ಅಗ್ರಿಕಲ್ಚರ್​ ಬ್ಯುಸಿನೆಸ್​ ಮ್ಯಾನೇಜ್​ಮೆಂಟ್​, ರೂರಲ್​ ಮ್ಯಾನೇಜ್​ಮೆಂಟ್​/ ಎಂಬಿಎಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ವೇತನ- ವಯೋಮಿತಿ: ಈ ಹುದ್ದೆಗೆ ಮಾಸಿಕ 60 ಸಾವಿರ ವೇತನ ನಿಗದಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21ರಿಂದ ಗರಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಮಾಡಲಾಗಿದೆ.

ಅರ್ಜಿ ಸಲ್ಲಿಕೆ:ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ನಿಗದಿಸಿದ್ದು, ಇತರ ಅಭ್ಯರ್ಥಿಗಳಿಗೆ 1000 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸರಿಯಾಗಿ ಪರಿಶೀಲಿಸಿ, ಭರ್ತಿ ಮಾಡಬೇಕು. ಅಗತ್ಯ ಮಾಹಿತಿ, ದಾಖಲೆ ಮತ್ತು ಅರ್ಜಿ ಶುಲ್ಕದ ವಿವರಗಳನ್ನು ಆನ್​ಲೈನ್​ ಮೂಲಕ ಭರ್ತಿ ಮಾಡಬೇಕಿದೆ.

ಈ ಹುದ್ದೆಗಳಿಗೆ ಆನ್​ಲೈನ್​ ಮೂಲಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು. ಈ ಹುದ್ದೆಗೆ ಅರ್ಜಿ ಸಲ್ಲಿಕೆ ಜೂನ್​ 24ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 9 ಆಗಿದೆ. ಜುಲೈ ಅಂತ್ಯ ಅಥವಾ ಆಗಸ್ಟ್​​ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಇದಾದ ತಿಂಗಳ ಬಳಿಕ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆ ಮಾಡಲು ಅಭ್ಯರ್ಥಿಗಳು aicofindia.com ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಏನಿದು ಎಐಸಿ: ಅಗ್ರಿಕಲ್ಚರ್​​ ಇನ್ಸುರೆನ್ಸ್​​ ಕಂಪನಿ ಆಫ್​ ಇಂಡಿಯಾ ಅಥವಾ ಭಾರತೀಯ ಕೃಷಿ ವಿಮಾ ಕಂಪನಿಯು ಜೀವೇತರ ವಿಮಾ ವಲಯವಾಗಿದೆ. ಬೆಳೆಗಳಿಗೆ ವಿಮೆ ನೀಡುವ ಅತಿ ದೊಡ್ಡ ವಲು ಇದಾಗಿದ್ದು, ಬೆಳೆ ವಿಮೆಯಲ್ಲಿ ಶೇ 50ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಇದನ್ನೂ ಓದಿ:NMPT Recruitment: ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ABOUT THE AUTHOR

...view details