ಕರ್ನಾಟಕ

karnataka

ETV Bharat / bharat

ಭ್ರಷ್ಟಾಚಾರ.. ಗುಮಾಸ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ..

ಬೆಳ್ಳಿ ಎಷ್ಟು ಸಿಕ್ಕಿದೆ ಎಂದು ನಿಖರ ಮಾಹಿತಿ ಲಭ್ಯವಾಗಿಲ್ಲ. 2.7 ಕೋಟಿ ರೂ.ವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಭದ್ರತಾ ಏಜೆನ್ಸಿಯೊಂದರ ದೂರಿನ ಆಧಾರದ ಮೇಲೆ, ದಾಳಿ ನಡೆಸಿದ ಮೂವರು ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ..

ಗುಮಾಸ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ
ಗುಮಾಸ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ

By

Published : May 29, 2021, 7:04 PM IST

ಭೋಪಾಲ್(ಮಧ್ಯಪ್ರದೇಶ) : ಲಂಚ ಪಡೆಯುತ್ತಿದ್ದ ವೇಳೆ ಎಫ್‌ಸಿಐ ವಿಭಾಗೀಯ ವ್ಯವಸ್ಥಾಪಕ ಸೇರಿ ನಾಲ್ವರನ್ನು ಸಿಬಿಐ ಭ್ರಷ್ಟಾಚಾರ ನಿಗ್ರಹ ದಳ ಖೆಡ್ಡಾಗೆ ಕೆಡವಿದೆ. ಈ ಪ್ರಕರಣದಲ್ಲಿ ಓರ್ವ ಗುಮಾಸ್ತನೂ ಭಾಗಿಯಾಗಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದರು.

ಡೈರಿ ಆಧರಿಸಿ ಶೋಧ..ಗುಮಾಸ್ತ ಕಿಶೋರ್ ಮೀನಾ ಮನೆ ಮೇಲೆ ಸಿಬಿಐ ಆಫೀಸರ್ಸ್ ದಾಳಿ ನಡೆಸಿದ್ದು, 8 ಕೆಜಿ ಚಿನ್ನ, 2.17 ಕೋಟಿ ರೂ.ಹಣವನ್ನು ವಶಪಡಿಸಿಕೊಂಡಿದ್ದಾರೆ.

ಎಫ್‌ಸಿಐ ಅಧಿಕಾರಿಗಳು ವಿವಿಧ ಕಂಪನಿಗಳಿಂದ ಪಡೆದಿರುವ ಲಂಚದ ಸಂಪೂರ್ಣ ವಿವರಗಳನ್ನು ಡೈರಿಯೊಂದರಲ್ಲಿ ಉಲ್ಲೇಖಿಸಿದ್ದಾರೆ. ಡೈರಿ ಆಧರಿಸಿ ಅಧಿಕಾರಿಗಳು ಶೋಧಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ನೋಟ್ ಎಣಿಕೆ ಮಷಿನ್ ಜಪ್ತಿ..ಸಿಬಿಐ, ಕಿಶೋರ್ ಮೀನಾ ಅವರ ಮನೆಯಲ್ಲಿ ಹಣ ಎಣಿಕೆಯ ಯಂತ್ರ ಸೇರಿದಂತೆ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದೆ. ಈವರೆಗೆ ಸುಮಾರು 8 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳ್ಳಿ ಎಷ್ಟು ಸಿಕ್ಕಿದೆ ಎಂದು ನಿಖರ ಮಾಹಿತಿ ಲಭ್ಯವಾಗಿಲ್ಲ. 2.7 ಕೋಟಿ ರೂ.ವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಭದ್ರತಾ ಏಜೆನ್ಸಿಯೊಂದರ ದೂರಿನ ಆಧಾರದ ಮೇಲೆ, ದಾಳಿ ನಡೆಸಿದ ಮೂವರು ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ.

ವಿಭಾಗೀಯ ವ್ಯವಸ್ಥಾಪಕರ ಹಣವನ್ನು ಕಿಶೋರ್​ ಮೀನಾ ಇಟ್ಟುಕೊಳ್ಳುತ್ತಿದ್ದರು. ಅಲ್ಲದೆ, ಇದೇ ರೀತಿ ಹತ್ತಾರು ಕೃತ್ಯಗಳನ್ನು ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗ್ತಿದೆ.

ABOUT THE AUTHOR

...view details