ಕರ್ನಾಟಕ

karnataka

By

Published : Mar 18, 2023, 11:31 AM IST

ETV Bharat / bharat

700 ಪಂಜಾಬಿ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಿದ ಕೆನಡಾ: ಟ್ರಾವೆಲ್​ ಏಜೆಂಟ್​​​ರಿಂದ​ ವಂಚನೆ

ವಿದೇಶದ ಓದಿನ ಹಂಬಲಕ್ಕೆ ಅನೇಕ ವಿದ್ಯಾರ್ಥಿಗಳು ಟ್ರಾವೆಲ್​ ಏಜೆಂಟ್​ಗಳ ಪೂರ್ವಾಪರ ಪರಿಶೀಲನೆ ನಡೆಸುವುದೇ ಇಲ್ಲ. ವಿದ್ಯಾರ್ಥಿಗಳ ಕನಸುಗಳನ್ನೇ ಬಂಡವಾಳ ಮಾಡಿಕೊಂಡು ಈ ಏಜೆಂಟ್​ಗಳು ಅವರನ್ನು ವಂಚಿಸಿ ಅತಂತ್ರರನ್ನಾಗಿ ಮಾಡುತ್ತಾರೆ

Canada deports 700 Punjabi students; The reason is travel agent fraud
Canada deports 700 Punjabi students; The reason is travel agent fraud

ಜಲಂಧರ್​: ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ಅನೇಕ ವಿದ್ಯಾರ್ಥಿಗಳ ಕನಸಿಗೆ ಕೆಲವೊಮ್ಮೆ ಭ್ರಮನಿರಸನವಾಗುವ ಘಟನೆಗಳು ನಡೆಯುತ್ತವೆ. ವಿದೇಶಿಗಳ ನೀತಿ ನಿಯಮ ತಿಳಿಯದೇ, ಮಧ್ಯವರ್ತಿಗಳ ವಂಚನೆ, ಸರಿಯಾದ ದಾಖಲಾತಿ ಪಡೆಯದೇ ಅಲ್ಲಿಗೆ ಹೋಗಿ ಅತಂತ್ರರಾಗುವ ಕುರಿತು ವರದಿ ಆಗುತ್ತಲೇ ಇರುತ್ತವೆ. ಅಂತಹುದ್ದೇ ಮತ್ತೊಂದು ಘಟನೆ ನಡೆದಿದೆ.

ಡಿಸಿಪಿ ವತ್ಸಲಾ ಗುಪ್ತಾ

ಕೆನಡಾದ ಒಂಟಾರಿಯೊದ ಟೊರೊಂಟೊದಲ್ಲಿರುವ ಹಂಬರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವ ಸಂಬಂಧ ಅವರಿಗೆ ಪತ್ರ ನೀಡಲಾಗಿದೆ. ಇದಕ್ಕೆ ಕಾರಣ ನಕಲಿ ದಾಖಲೆ ಮತ್ತು ಪ್ರಮಾಣ ಪತ್ರ. ಜಲಂಧರ್‌ನ ಟ್ರಾವೆಲ್ ಏಜೆಂಟ್​ 16 ರಿಂದ 20 ಲಕ್ಷ ಪಡೆದು, ನಕಲಿ ದಾಖಲೆ ಮತ್ತು ಪ್ರಮಾಣಪತ್ರ ಸೃಷ್ಟಿಸಿ ಈ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಿದ್ದ. ಆದರೆ, ಇದೀಗ ಅದನ್ನು ಅರಿತ ಅಲ್ಲಿನ ಕಾಲೇಜು ಮತ್ತು ಸರ್ಕಾರ ಆ ವಿದ್ಯಾರ್ಥಿಗಳು ಕೆನಡಾದಿಂದ ಭಾರತಕ್ಕೆ ಮರಳುವಂತೆ ಸೂಚಿಸಿದೆ.

ಇನ್ನು ಈ ಬಗ್ಗೆ ಟ್ರಾವೆಲ್​ ಏಜೆಂಟ್​ ವಿಚಾರಿಸಲು ಮುಂದಾದಾಗ ಆತ ಕಚೇರಿ ಮುಚ್ಚಿ ಆರು ತಿಂಗಳಾಗಿದೆ ಎಂಬ ಸತ್ಯ ಬಯಲಾಗಿದ್ದು, ಅಮಾಯಕ ವಿದ್ಯಾರ್ಥಿಗಳನ್ನು ವಂಚಿಸಿ, ಆತನ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಮಾಹಿತಿ ನೀಡಿರುವ ಡಿಸಿಪಿ ವತ್ಸಲಾ ಗುಪ್ತಾ, ಜಲಂಧರ್‌ನ ಗ್ರೀನ್‌ ಪಾರ್ಕ್‌ನಲ್ಲಿ ಟ್ರಾವೆಲ್‌ ಏಜೆಂಟ್‌ ಇಮಿಗ್ರೇಷನ್‌ ಕೆಲಸ ಮಾಡುತ್ತಿದ್ದ ಬಗ್ಗೆ ವರದಿಗಳು ಬಂದಿತ್ತು. ಇದೀಗ ಆತ ಕಳುಹಿಸಿದ ಸುಮಾರು 700 ವಿದ್ಯಾರ್ಥಿಗಳಿಗೆ ಗಡಿಪಾರು ಆದೇಶ ಬಂದಿದೆ. ಈ ಪ್ರಕರಣ ಸಂಬಂದ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಆದರೂ, ಈ ಸಂಬಂಧ ಪ್ರಕರಣ ತನಿಖೆಗೆ ಮುಂದಾಗಿದ್ದೇವೆ ಎಂದಿದ್ದಾರೆ.

ನಕಲಿ ಇಮಿಗ್ರೇಷನ್​ ಏಜೆಂಟ್​ಗಳು ಜನರನ್ನು ವಂಚಿಸಿ, ಹಣ ಪಡೆದು, ವಿದೇಶಕ್ಕೆ ಓಡಿ ಹೋಗುತ್ತಾರೆ. ಈ ಹಿನ್ನಲೆ ಜನರು ಕೂಡ ಎಚ್ಚರಿಕೆಯಿಂದ ಇರಬೇಕು. ಈ ರೀತಿಯ ಪ್ರಕರಣಗಳು ಆದಾಗ ಜನರು ಕೂಡ ತಕ್ಷಣಕ್ಕೆ ಪೊಲೀಸರಿಗೆ ಮಾಹಿತಿ ನೀಡಬೇಕು. ಆಗ ಇಂತಹವರ ವಿರುದ್ಧ ಕಾರ್ಯಾಚರಣೆ ನಡೆಸಬಹುದು. ಸದ್ಯ ವಿದ್ಯಾರ್ಥಿಗಳಿಗೆ ಗಡಿಪಾರು ಪತ್ರ ರವಾನೆಯಾಗಿದ್ದು, ಈ ಸಂಬಂಧ ಕೆನಡಾದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಡಿಸಿಪಿ ಬ್ರಿಜೇಶ್​ ಮಿಶ್ರಾ ಮಾಹಿತಿ ನೀಡಿದರು.

ಶಿಕ್ಷಣಕ್ಕಾಗಿ ಕೆನಾಡಕ್ಕೆ ಹೋದ ಬಹುತೇಕ ವಿದ್ಯಾರ್ಥಿಗಳು, ಜಲಂಧರ್ ಟ್ರಾವೆಲ್ ಏಜೆಂಟ್ಸ್ ನಡೆಸುತ್ತಿರುವ ಶಿಕ್ಷಣ ವಲಸೆ ಸೇವೆಗಳ ಮೂಲಕ ದಾಖಲಾತಿ ಪ್ರಕ್ರಿಯೆ ನಡೆಸಿದ್ದಾರೆ. ಈ ವಿದ್ಯಾರ್ಥಿಗಳು ಖಾಯಂ ನಿವಾಸಿ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದಾಗ, ಅವರ ಪ್ರವೇಶ ನಮೂನೆಗಳು ನಕಲಿ ಎಂದು ಕಂಡು ಬಂದಿದೆ. ಬಳಿಕ ಅವರನ್ನು ಗಡಿಪಾರು ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಆದೇಶಗಳನ್ನು ಏಪ್ರಿಲ್-ಮೇ 2022 ರಲ್ಲಿ ನೀಡಲಾಗಿದೆ.

ಕೆಲವು ವಿದ್ಯಾರ್ಥಿಗಳು ಕಾನೂನು ಹೋರಾಟ ನಡೆಸಿದರಾದರೂ, ಅವರು ಅದರಲ್ಲಿ ಸೋತಿದ್ದಾರೆ. ಈ ಹಿನ್ನಲೆ ಅವರು ಭಾರತಕ್ಕೆ ಮರಳಲೇ ಬೇಕಾಗಿದೆ. ಇದರ ಜೊತೆಗೆ ಇನ್ನು ಕೆಲವು ವಿದ್ಯಾರ್ಥಿಗಳು ಕೋರ್ಟ್​ನಲ್ಲಿ ಹೋರಾಟ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಒಂದೇ ಮನೆಯಲ್ಲಿ ಇಬ್ಬರು ಐಎಎಸ್​​ ಅಧಿಕಾರಿಗಳು.. ಇವರ ಯಶಸ್ಸಿನ ಹಿಂದಿದೆ ಅಮ್ಮನ ತ್ಯಾಗ!

ABOUT THE AUTHOR

...view details