ಕರ್ನಾಟಕ

karnataka

ETV Bharat / bharat

ಸಿಎಎ ತಮಿಳು ಸಮುದಾಯದ  ವಿರೋಧಿಯಾಗಿದೆ: ಸುಪ್ರೀಂಕೋರ್ಟ್​ಗೆ ಡಿಎಂಕೆ ಅಫಿಡವಿಟ್

ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವ ಮೂಲಕ ಸಿಎಎ ಜಾತ್ಯತೀತತೆಯ ಮೂಲ ರಚನೆ ನಾಶ ಮಾಡುತ್ತದೆ ಎಂದು ಡಿಎಂಕೆ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ತಮಿಳು ನಿರಾಶ್ರಿತರನ್ನು ಕಾನೂನಿನ ವ್ಯಾಪ್ತಿಗೆ ತರದ ಕಾರಣ ಇದು ತಮಿಳು ಜನಾಂಗದ ವಿರುದ್ಧವೂ ಆಗಿದೆ ಎಂದು ಡಿಎಂಕೆ ಪಕ್ಷ ಹೇಳಿದೆ.

By

Published : Nov 30, 2022, 3:24 PM IST

ಸಿಎಎ ತಮಿಳು ಜನಾಂಗ ವಿರೋಧಿಯಾಗಿದೆ: ಸುಪ್ರೀಂಕೋರ್ಟ್​ಗೆ ಡಿಎಂಕೆ ಅಫಿಡವಿಟ್
caa-is-anti-tamil-dmk-affidavit-to-supreme-court

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) 2019 ಇದು ಮುಸ್ಲಿಮರನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವುದರಿಂದ ಏಕಪಕ್ಷೀಯವಾಗಿದೆ. ಸಿಎಎ ಕೇವಲ ಮೂರು ದೇಶಗಳಿಗೆ (ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ) ಮತ್ತು ಕೇವಲ ಆರು ಧರ್ಮಗಳಿಗೆ (ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳು) ಮಾತ್ರ ಅನ್ವಯವಾಗುತ್ತದೆ ಎಂದು ಡಿಎಂಕೆ ಸುಪ್ರೀಂಕೋರ್ಟ್​ಗೆ ಹೇಳಿದೆ. ಸಿಎಎ ಕಾಯ್ದೆಯನ್ನು ಪ್ರಶ್ನಿಸಿ ತಾನು ಸಲ್ಲಿಸಿದ ಅರ್ಜಿಯಲ್ಲಿ ಡಿಎಂಕೆ ಇದನ್ನು ಹೇಳಿದೆ.

ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವ ಮೂಲಕ ಸಿಎಎ ಜಾತ್ಯತೀತತೆಯ ಮೂಲ ರಚನೆಯನ್ನು ನಾಶಪಡಿಸುತ್ತದೆ ಎಂದು ಡಿಎಂಕೆ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ತಮಿಳು ನಿರಾಶ್ರಿತರನ್ನು ಕಾನೂನಿನ ವ್ಯಾಪ್ತಿಗೆ ತರದ ಕಾರಣ ಇದು ತಮಿಳು ಜನಾಂಗದ ವಿರುದ್ಧವೂ ಆಗಿದೆ ಎಂದು ಪಕ್ಷ ಹೇಳಿದೆ.

ಅದರ ಸಂಘಟನಾ ಕಾರ್ಯದರ್ಶಿ ಆರ್ ಎಸ್ ಭಾರತಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ, ತಮಿಳುನಾಡು ಆಡಳಿತ ಪಕ್ಷವು ತಿದ್ದುಪಡಿ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತದೆ. ಇದನ್ನು ಸಮಾಜದ ವಿವಿಧ ಹಂತಗಳ ಜನರು ಸಹ ಪ್ರಶ್ನಿಸಿದ್ದಾರೆ ಎಂದು ತಿಳಿಸಲಾಗಿದೆ.

ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು /ನೀಡದಿರಲು ಕಾಯಿದೆಯು ಸಂಪೂರ್ಣವಾಗಿ ಹೊಸ ಆಧಾರವನ್ನು ಪರಿಚಯಿಸುತ್ತದೆ. ಇದು ಜಾತ್ಯತೀತತೆ ಆಧಾರವನ್ನು ನಾಶಪಡಿಸುತ್ತದೆ. ಶೋಷಣೆಗೆ ಒಳಗಾದ ಆರು ದೇಶಗಳಲ್ಲಿನ ಮುಸ್ಲಿಮರನ್ನು ಏಕೆ ಸಂಪೂರ್ಣವಾಗಿ ಹೊರಗಿಡಲಾಗಿದೆ ಎಂಬುದಕ್ಕೆ ಯಾವುದೇ ಕಾರಣ ನೀಡಿಲ್ಲ. ಈ ಕಾಯಿದೆಯು ತಮಿಳು ಜನಾಂಗಕ್ಕೆ ವಿರುದ್ಧವಾಗಿದೆ ಮತ್ತು ತಮಿಳುನಾಡಿನಲ್ಲಿ ನೆಲೆಸಿರುವ ತಮಿಳರನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡುತ್ತದೆ ಎಂದು ಅಫಿಡವಿಟ್ ಹೇಳಿದೆ.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಜಾರಿಗೆ ತರುವುದಿಲ್ಲ: ಅಮಿತ್​ ಶಾಗೆ ಪಿಣರಾಯಿ ತಿರುಗೇಟು

ABOUT THE AUTHOR

...view details