ಬೆಂಗಳೂರು: ಗುಜರಾತ್ ಮೂಲದ ಡಿಸೈನರ್ ಒಬ್ಬರು ಹೊಸ ಬಗೆಯ ರಾಖಿಗಳನ್ನು ಡಿಸೈನ್ ಮಾಡಿದ್ದು, ಇವರು ರಕ್ಷಾ ಬಂಧನಗಳ ವಿನ್ಯಾಸವನ್ನೇ ಒಂದು ಹಂತ ಮೇಲಕ್ಕೇರಿಸಿದ್ದಾರೆ. ಇವರು ತಯಾರಿಸಿರುವ ಡೈಮಂಡ್ ರಾಖಿಗಳು ಈಗ ಬಹಳ ಜನಪ್ರಿಯವಾಗುತ್ತಿವೆ.
ಬೆಲೆಬಾಳುವ ಡೈಮಂಡ್ಗಳು ಮಾತ್ರವಲ್ಲದೇ ಇವರು ತಯಾರಿಸಿರುವ ರಾಖಿಗಳು ಪರಿಸರ ಸ್ನೇಹಿಯಾಗಿರುವುದು ಮತ್ತೊಂದು ವಿಶೇಷವಾಗಿದೆ. ಈ ಡೈಮಂಡ್ ರಾಖಿಗಳಲ್ಲಿ ರಿಸೈಕಲ್ ಮಾಡಿದ ಚಿನ್ನವನ್ನು ಬಳಸಲಾಗಿದೆಯಂತೆ. ಅಂದ ಹಾಗೆ ಇವುಗಳ ಬೆಲೆ 3 ಸಾವಿರ ರೂಪಾಯಿಗಳಿಂದ 8 ಸಾವಿರ ರೂಪಾಯಿಗಳ ರೇಂಜ್ನಲ್ಲಿದೆ.
“ನಾವು ಪರಿಸರ ಸ್ನೇಹಿ ರಾಖಿಗಳನ್ನು ತಯಾರಿಸಿದ್ದೇವೆ. ಇವು ಮರುಬಳಕೆಯ ಚಿನ್ನದಿಂದ ಮಾಡಲ್ಪಟ್ಟಿವೆ ಮತ್ತು ಇದರಲ್ಲಿ ವಜ್ರವನ್ನು ವಿಶೇಷ ರೀತಿಯಲ್ಲಿ ಬಳಸಲಾಗಿದೆ. ಇವುಗಳ ಬೆಲೆ ಸುಮಾರು 3,000 ರಿಂದ 8,000 ರೂಪಾಯಿಗಳಾಗಿವೆ”ಎಂದು ಉದ್ಯಮಿ ರಜನಿಕಾಂತ್ ಚಾಚಂದ್ ಮಾಧ್ಯಮಗಳಿಗೆ ತಿಳಿಸಿದರು. ಈ ವಜ್ರದ ರಾಖಿಗಳನ್ನು ಉದ್ಯಮಿ ರಜನಿಕಾಂತ್ ಚಾಚಂದ್ ಅವರು ಗುಜರಾತ್‌ನ ಸೂರತ್ ನಗರದಲ್ಲಿ ಮಾರಾಟ ಮಾಡುತ್ತಿದ್ದಾರೆ.