ಕರ್ನಾಟಕ

karnataka

ETV Bharat / bharat

ಜೇನು ನೊಣಗಳ ದಾಳಿಗೆ ಇಬ್ಬರು ಮಕ್ಕಳ ಸಾವು - ರಾಂಚಿಯ ಇಟ್ಕಿ ಪೊಲೀಸ್ ಠಾಣಾ ವ್ಯಾಪ್ತಿ

ಜೇನು ನೊಣಗಳ ದಾಳಿಗೆ ಗಾಯಗೊಂಡ ಮಕ್ಕಳಿಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ರಾಂಚಿಯ ಇಟ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

bumblebees-bite-claims-two-minor-siblings-lives-in-ranchi
ರಾಂಚಿ : ಜೇನು ನೊಣಗಳ ದಾಳಿಗೆ ಇಬ್ಬರು ಮಕ್ಕಳು ಸಾವು

By

Published : Aug 6, 2022, 11:11 AM IST

ರಾಂಚಿ (ಜಾರ್ಖಂಡ್): ಜೇನು ನೊಣಗಳ ದಾಳಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಇಟ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೌಸಿಬರಿ ಗ್ರಾಮದಲ್ಲಿ ನಡೆದಿದೆ. ಮೃತ ಮಕ್ಕಳನ್ನು ಮಿರಾಹಾ(2), ಅಫನ್ (7) ಎಂದು ಗುರುತಿಸಲಾಗಿದೆ. ಮೃತ ಮಕ್ಕಳ ತಾಯಿ ಜಮೀಲಾ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಮತ್ತೊಬ್ಬ ಮಗ ಸಲ್ಮಾನ್(5) ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಮೃತ ಮಕ್ಕಳ ತಂದೆ ಸಜ್ಜದ್ ಆಲಂ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ರಾಂಚಿಯ ಇಟ್ಕಿ ಮೌಸಿಬರಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಸಂದರ್ಭದಲ್ಲಿ ಜೇನುನೊಣಗಳು ಮನೆಗೆ ನುಗ್ಗಿ, ಸಜ್ಜದ್ ಅವರ ಕುಟುಂಬದವರ ಮೇಲೆ ದಾಳಿ ನಡೆಸಿತ್ತು. ತಕ್ಷಣ ಇವರನ್ನು ಚಿಕಿತ್ಸೆಗಾಗಿ ರಾಂಚಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಔಷಧಗಳನ್ನು ನೀಡಿ ಮನೆಗೆ ತೆರಳುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.

ಆದರೆ, ಮತ್ತೆ ಮಕ್ಕಳು ಅಸ್ವಸ್ಥರಾಗಿದ್ದು, ಮತ್ತೊಮ್ಮೆ ರಾಂಚಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಓದಿ :ಮನೆಗೆ ಹೊತ್ತಿಕೊಂಡು ಧಗ ಧಗಿಸಿದ ಅಗ್ನಿಗೆ ಮೂವರು ಮಕ್ಕಳು ಸೇರಿ 10 ಮಂದಿ ಸಜೀವ ದಹನ

ABOUT THE AUTHOR

...view details