ಕರ್ನಾಟಕ

karnataka

ETV Bharat / bharat

ಬ್ರಿಟಿಷರೇ ಹಿಂದೂ- ಮುಸ್ಲಿಂ ನಡುವೆ ಸಂಘರ್ಷ ಉಂಟು ಮಾಡಿದ್ದು : ಮೋಹನ್​ ಭಾಗವತ್

ಹಿಂದೂಗಳಿಗೆ ಮುಸ್ಲಿಂಬಗ್ಗೆ ಕೆಟ್ಟದಾಗಿ ಹೇಳಿದ್ದರು ಹಾಗೆ ಮುಸ್ಲಿಮರು ಉಗ್ರಗಾಮಿಗಳು ಎಂದು ಹಿಂದೂಗಳಿಗೆ ಹೇಳಿದ್ದರು. ಈ ಮೂಲಕ ಎರಡೂ ಸಮುದಾಯಗಳಲ್ಲಿ ಸಂಘರ್ಷ ಬೆಳೆಯುವಂತೆ ಬ್ರಿಟಿಷರು ಮಾಡಿದ್ದಾರೆ ಎಂದು ಮೋಹನ್​ ಭಾಗವತ್ ಹೇಳಿದ್ದಾರೆ.

ಮೋಹನ್​ ಭಾಗವತ್
ಮೋಹನ್​ ಭಾಗವತ್

By

Published : Sep 7, 2021, 4:08 AM IST

ಮುಂಬೈ: ಬ್ರಿಟಿಷರು ಇಲ್ಲಿ ಆಳ್ವಿಕೆ ಮಾಡುವಾಗ ಹಿಂದೂಗಳೊಂದಿಗೆ ಬದುಕಲು ನಿರ್ಧರಿಸಿದರೆ ನಿಮಗೆ ಏನೂ ಸಿಗುವುದಿಲ್ಲ ಎಂದು ಮುಸ್ಲಿಮರಿಗೆ ಹೇಳಿ ಅವರಲ್ಲಿ ಕಲ್ಪನೆಯನ್ನು ಸೃಷ್ಟಿಸಿದ್ದರು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.

'ರಾಷ್ಟ್ರ ಪ್ರಥಮ-ರಾಷ್ಟ್ರ ಸರ್ವೋಪರಿ' ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹಿಂದೂಗಳಿಗೆ ಮುಸ್ಲಿಂಬಗ್ಗೆ ಕೆಟ್ಟದಾಗಿ ಹೇಳಿದ್ದರು ಹಾಗೆ ಮುಸ್ಲಿಮರು ಉಗ್ರಗಾಮಿಗಳು ಎಂದು ಹಿಂದೂಗಳಿಗೆ ಹೇಳಿದ್ದರು. ಈ ಮೂಲಕ ಎರಡೂ ಸಮುದಾಯಗಳಲ್ಲಿ ಸಂಘರ್ಷ ಬೆಳೆಯುವಂತೆ ಮಾಡಿದರು ಎಂದರು.

ಆ ಮನಸ್ಥಿತಿಯಲ್ಲೇ ಹೋರಾಟ ಮತ್ತು ನಂಬಿಕೆಯ ಕೊರತೆಯ ಪರಿಣಾಮವಾಗಿ, ಇಬ್ಬರೂ ಪರಸ್ಪರ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾತನಾಡಿಕೊಳ್ಳುವಂತಾಗಿದೆ. ಈ ಹಿನ್ನೆಲೆ ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಭಾಗವತ್ ಸಲಹೆ ನೀಡಿದರು.

ABOUT THE AUTHOR

...view details