ಕರ್ನಾಟಕ

karnataka

ETV Bharat / bharat

ಅವರಲ್ಲಿ... ಇವರಿಲ್ಲಿ... ಕೊರಳಿಗೆ ಹಾರ ಮಾತ್ರ ಕೋಲಿನಲ್ಲಿ... ಯಾಕೆ ಗೊತ್ತಾ?

ಬಿಹಾರ ಪಾಟ್ನಾದ ಬಿಬ್​ಗಂಜ್​ನಲ್ಲಿ ವಿವಾಹ ಸಮಾರಂಭ ನಡೆದಿದ್ದು, ಈ ವೇಳೆ ವಧು-ವರ ಸಾಮಾಜಿಕ ಅಂತರ ಕಾಯ್ದುಕೊಂಡು ಕೋಲಿನ ಸಹಾಯದಿಂದ ಹಾರ ಬದಲಾಯಿಸಿಕೊಂಡಿದ್ದಾರೆ.

By

Published : Dec 2, 2020, 8:14 PM IST

Updated : Dec 2, 2020, 8:56 PM IST

ಸಾಮಾಜಿಕ ಅಂತರ ಕಾಯ್ದುಕೊಂಡ ವಧು-ವರ
ಸಾಮಾಜಿಕ ಅಂತರ ಕಾಯ್ದುಕೊಂಡ ವಧು-ವರ

ಪಾಟ್ನಾ:ಕೊರೊನಾ ಸಾಂಕ್ರಾಮಿಕ ರೋಗವು ಎಲ್ಲ ಕ್ಷೇತ್ರಗಳಲ್ಲೂ ಪರಿಣಾಮ ಬೀರಿದ್ದು, ವಿವಾಹ ಸಮಾರಂಭದ ಮೇಲೂ ಪ್ರಭಾವ ಬೀರಿದೆ. ಇದು ವಿವಾಹ ಸಮಾರಂಭಗಳ ಶೈಲಿಯನ್ನು ಬದಲಾಯಿಸಿದೆ. ಇನ್ನು ಇಲ್ಲಿನ ಬಿಬ್​ಗಂಜ್​ನಲ್ಲಿ ವಿವಾಹ ಸಮಾರಂಭ ನಡೆದಿದ್ದು, ಈ ವೇಳೆ, ವಧು-ವರ ಸಾಮಾಜಿಕ ಅಂತರ ಕಾಯ್ದುಕೊಂಡು ಹಾರ ಬದಲಾಯಿಸಿಕೊಂಡಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಂಡ ವಧು-ವರ

ರಾಹುಲ್​ ಮತ್ತು ಭಾರತಿ ಎಂಬುವರ ಮದುವೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಅಷ್ಟೇ ಅಲ್ಲದೆ ವಧು ಮತ್ತು ವರನ ಕಡೆಯವರು ಸಾಮಾಜಿಕ ಅಂತರದ ಜೊತೆಗೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವಧು - ವರರು ಮಾಸ್ಕ್​ ಬಳಕೆ ಮಾಡಿ ಕೋಲಿನ ಸಹಾಯದಿಂದ ಹಾರ ಬದಲಾಯಿಸಿಕೊಂಡರು. ಇನ್ನು ಊಟದ ಕೌಂಟರ್​ ಬಳಿಯೂ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬಂದ ಅತಿಥಿಗಳು ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಹೊಡೆದೋಡಿಸಲು ಸಾತ್​ ನೀಡಿದರು.

Last Updated : Dec 2, 2020, 8:56 PM IST

ABOUT THE AUTHOR

...view details