ಮುಂಗೇಲಿ (ಛತ್ತೀಸ್ಗಢ):ಮದುವೆಯಾಗಿದ್ದರೂ ಮತ್ತೊಂದು ಯುವತಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಛತ್ತೀಸ್ಗಢದ ಮುಂಗೇಲಿಯ ಬ್ಲಾಕ್ ಶಿಕ್ಷಣಾಧಿಕಾರಿ ಇದೀಗ ಆಕೆಯನ್ನು ಸಹ ಮದುವೆಯಾಗಿದ್ದಾರೆ. ಅವರು ಸಪ್ತಪದಿ ತುಳಿಯುವ ವೇಳೆ ಆಕೆ ತುಂಬು ಗರ್ಭಿಣಿಯಾಗಿದ್ದಳು ಎಂಬುದೇ ಇಲ್ಲಿ ವಿಶೇಷ.
ಮುಂಗೇಲಿಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಪಿ.ಎಸ್. ಬೇಡಿ (54) ಅವರು 23 ವರ್ಷದ ಯುವತಿ ಜೊತೆ ಏಳು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದು, ಆಕೆ ಹೊಟ್ಟೆಯಲ್ಲಿ ಅಧಿಕಾರಿಯ ಮಗು ಬೆಳೆಯುತ್ತಿತ್ತು. ಮದುವೆಗೆ ನಿರಾಕರಿಸಿದ್ದ ಬೇಡಿ ವಿರುದ್ಧ ಯುವತಿ ಜರಗಾಂವ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಳು.