ಮಹೋಬಾ (ಯುಪಿ):ಉತ್ತರ ಪ್ರದೇಶ ವಿಧಾನಸಭೆಯೊಳಗೆ ಬಿಜೆಪಿ ಶಾಸಕರು ಫೋನ್‌ನಲ್ಲಿ ಗೇಮ್ (ಕಾರ್ಡ್ಸ್) ಆಡುತ್ತಿರುವ ಮತ್ತು ತಂಬಾಕು ಜಗಿಯುತ್ತಿರುವ ಎರಡು ವಿಡಿಯೋಗಳನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಶನಿವಾರ ಬಿಡುಗಡೆ ಮಾಡಿದ್ದು, ಸಭೆಯ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಒಂದು ವಿಡಿಯೋದಲ್ಲಿ ಮಹೋಬಾದ ಬಿಜೆಪಿ ಶಾಸಕ ರಾಕೇಶ್ ಗೋಸ್ವಾಮಿ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಡ್-ಗೇಮ್ 'ತೀನ್ ಪತ್ತಿ' ಆಡುತ್ತಿರುವುದು ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ ಬಿಜೆಪಿಯ ಝಾನ್ಸಿ ಶಾಸಕ ರವಿ ಶರ್ಮಾ ಅವರು ಅಸೆಂಬ್ಲಿಯ ಮುಂಗಾರು ಅಧಿವೇಶನದಲ್ಲಿ ಕುಳಿತು ತಂಬಾಕು ಜಗಿಯುತ್ತಿರುವುದನ್ನು ಕಾಣಬಹುದು.