ಭುವನೇಶ್ವರ(ಒಡಿಶಾ):ಇಲ್ಲಿನ ನಂದಕನನ್ ಪ್ರಾಣಿ ಸಂಗ್ರಹಾಲಯದಲ್ಲಿ ಸ್ನೇಹ ಎಂಬ ಬಿಳಿ ಹುಲಿ(ವೈಟ್ ಟೈಗರ್) ಇಂದು ಬೆಳಗ್ಗೆ ಎರಡು ಮರಿಗಳಿಗೆ ಜನ್ಮ ನೀಡಿದೆ.
ಎರಡು ಮರಿಗಳಿಗೆ ಜನ್ಮ ನೀಡಿದ ವೈಟ್ ಟೈಗರ್ ಸ್ನೇಹ - ಬಿಳಿ ಹುಲಿ
ಒಡಿಶಾದ ನಂದಕನನ್ ಮೃಗಾಲಯದಲ್ಲಿ ಬಿಳಿ ಹುಲಿಯು ಎರಡು ಮರಿಗಳಿಗೆ ಜನ್ಮ ನೀಡಿದೆ.
ವೈಟ್ ಟೈಗರ್
ನಂದಕನನ್ ವನ್ಯಧಾಮದಲ್ಲಿ ಈಗಾಗಲೇ 25 ಹುಲಿಗಳಿದ್ದು, ಅದರಲ್ಲಿ 13 ಸಾಮಾನ್ಯ ಹುಲಿಗಳಾಗಿದ್ದು, 4 ಮೆಲಾನಿಸ್ಟಿಕ್(ತೀವ್ರ ಕಪ್ಪು ಬಣ್ಣದ) ಹುಲಿ ಹಾಗೂ ಈ ಎರಡು ಬಿಳಿ ಹುಲಿ ಮರಿಗಳು ಸೇರಿದಂತೆ ಒಟ್ಟು 10 ಬಿಳಿ ಹುಲಿಗಳಿವೆ.
ಇಂದು ನಸುಕಿನಜಾವ 3.40ರಿಂದ 5.44ರ ಸುಮಾರಿಗೆ ಸ್ನೇಹ ಎರಡು ಹುಲಿ ಮರಿಗಳಿಗೆ ಜನ್ಮ ನೀಡಿದೆ. ಅದು ಮರಿಗಳ ಆರೈಕೆಯಲ್ಲಿ ತೊಡಗಿರುವುದನ್ನು, ಸಿಸಿಟಿವಿ ಫೂಟೇಜ್ಗಳ ಮೂಲಕ ಗಮನಿಸುತ್ತಿದ್ದೇವೆ ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.