ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಹೀಗೆ ಮುಂದುವರಿಯುತ್ತದೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಆಶ್ವಾಸನೆ ನೀಡಿದ ಬೆನ್ನಲ್ಲೇ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಪ್ರತಿಕ್ರಿಯಿಸಿದ್ದಾರೆ.
ಎಂಎಸ್‌ಪಿ ಕೊನೆಗೊಳ್ಳುತ್ತಿದೆ ಎಂದು ನಾವು ಯಾವತ್ತು ಹೇಳಿದ್ದೇವೆ? ಎಂಎಸ್‌ಪಿ ಮೇಲೆ ಕಾನೂನು ರಚಿಸಿ ಎಂದು ನಾವು ಹೇಳಿದ್ದೇವೆ. ಅಂತಹ ಕಾನೂನು ರೂಪುಗೊಂಡರೆ ದೇಶದ ಎಲ್ಲ ರೈತರಿಗೆ ಅನುಕೂಲವಾಗಲಿದೆ. ಆದರೆ, ಇಲ್ಲಿಯವರೆಗೆ ಎಂಎಸ್‌ಪಿಗೆ ಯಾವುದೇ ಕಾನೂನು ಇಲ್ಲ. ಹಾಗಾಗಿ ವ್ಯಾಪಾರಿಗಳು ರೈತರನ್ನು ಲೂಟಿ ಮಾಡುತ್ತಾರೆ, ಎಂದು ಟಿಕಾಯತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.