ಪುರಿ(ಒಡಿಶಾ): ದುರ್ಗಾ ಪೂಜೆಯ ಶುಭ ಸಂದರ್ಭದಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ದುರ್ಗಾ ಮಾತೆಯ ಬೃಹತ್ ಮರಳು ಕಲಾಕೃತಿ ರಚಿಸುವ ಮೂಲಕ ಗಮನ ಸೆಳೆದಿದ್ದಾರೆ.
ಕಲಾವಿದನ ಕೈಚಳಕ: ಮರಳಿನಲ್ಲಿ ಅರಳಿದ ದುರ್ಗಾ ಮಾತೆ ಕಲಾಕೃತಿಗೆ ನೆಟ್ಟಿಗರು ಫಿದಾ! - ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್
ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಮರಳಿನಲ್ಲಿ ದುರ್ಗಾ ಮಾತೆಯ ಬೃಹತ್ ಕಲಾಕೃತಿ ರಚಿಸುವ ಮೂಲಕ ದೇವಿಗೆ ಗೌರವ ಸಲ್ಲಿಸಿದ್ದಾರೆ.
ಮರಳಿನಲ್ಲಿ ದುರ್ಗಾ ಮಾತೆಯ ಕಲಾಕೃತಿ ರಚಿಸುವ ಮೂಲಕ ದೇವಿಗೆ ಗೌರವ ಸಲ್ಲಿಸಿದ್ದಾರೆ. ಕಲಾಕೃತಿಯ ಫೋಟೋವನ್ನು ಟ್ವೀಟ್ ಮಾಡಿರುವ ಪಟ್ನಾಯಕ್, ಹ್ಯಾಪಿ ನವರಾತ್ರಿ, ದುರ್ಗಾ ಮಾತೆ ನಮಗೆ ಎಲ್ಲಾ ಸಮಯದಲ್ಲೂ ಶಾಂತಿ, ಸಮೃದ್ಧಿ ಮತ್ತು ಒಳ್ಳೆಯತನವನ್ನೇ ಆಶೀರ್ವದಿಸಲಿ ಎಂದಿದ್ದಾರೆ.
ಸುದರ್ಶನ್ ಪಟ್ನಾಯಕ್ ಕೈಯಲ್ಲಿ ಮೂಡಿಬಂದ ದುರ್ಗಾ ಮಾತೆಯ ಕಲಾಕೃತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅದ್ಭುತ ಕಲಾಕೃತಿ ರಚಿಸಿದ ಕಲಾವಿದನಿಗೆ ಧನ್ಯವಾದಗಳು ಎಂದು ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪಟ್ನಾಯಕ್ ತಮ್ಮ ಮರಳು ಕಲೆಯ ಮೂಲಕ ಕಲಾಕೃತಿಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ರು. ಕೋವಿಡ್ ನಿಯಮಗಳನ್ನು ಪಾಲಿಸಿ, ಹಬ್ಬ ಆಚರಿಸುವಂತೆ ಮನವಿ ಮಾಡಿದ್ದಾರೆ.