ಕರ್ನಾಟಕ

karnataka

ETV Bharat / bharat

ಪಕ್ಷಿಗಳಿಗೆ ಇಟ್ಟಿದ್ದ ಅನ್ನ ತಿಂದು ಹೊಟ್ಟೆ ತುಂಬಿಸಿಕೊಂಡ ರೋಗಿ... ಕರುಳು ಹಿಂಡುವ ವಿಡಿಯೋ - ಜಾರ್ಖಂಡ್‌ನ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್

ಒಪಿಡಿ ಕಾಂಪ್ಲೆಕ್ಸ್ ಕಾಂಪೌಂಡ್‌ನಲ್ಲಿ ಪಕ್ಷಿಗಳಿಗಾಗಿ ಎಸೆಯಲ್ಪಟ್ಟ ಅನ್ನವನ್ನು ತಿನ್ನುತ್ತಿದ್ದ ದೃಶ್ಯ ಆತನ ಅಸಹಾಯಕತೆಯನ್ನು ತೋರುವಂತೆ ಮಾಡಿತ್ತು. ಫಿಲಿಪ್​ ಎಂಬ ರೋಗಿ ಈ ರೀತಿ ಮಾಡಿದ್ದು, ಈತ ಹಲವಾರು ದಿನಗಳಿಂದ ಆಹಾರವಿಲ್ಲದೆ ಹಸಿವಿನಿಂದ ಬಳಲಿದ್ದ ಎನ್ನಲಾಗಿದೆ.

ಪಕ್ಷಿಗಳಿಗೆ ಇಟ್ಟಿದ್ದ ಅನ್ನ ತಿಂದ ವ್ಯಕ್ತಿ
ಪಕ್ಷಿಗಳಿಗೆ ಇಟ್ಟಿದ್ದ ಅನ್ನ ತಿಂದ ವ್ಯಕ್ತಿ

By

Published : Apr 5, 2020, 8:16 AM IST

ರಾಂಚಿ: ಜಾರ್ಖಂಡ್‌ನ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್) ನಲ್ಲಿ ರೋಗಿಯೊಬ್ಬ ತೀವ್ರ ಹಸಿವಿನಿಂದ ಆಸ್ಪತ್ರೆಯಿಂದ ಹೊರಬಂದು ಪಕ್ಷಿಗಳಿಗಾಗಿ ಇಡಲಾಗಿದ್ದ ಆಹಾರವನ್ನು ಸೇವಿಸಿದ್ದಾನೆ.

ಪಕ್ಷಿಗಳಿಗೆ ಇಟ್ಟಿದ್ದ ಅನ್ನ ತಿಂದ ವ್ಯಕ್ತಿ

ಒಪಿಡಿ ಕಾಂಪ್ಲೆಕ್ಸ್ ಕಾಂಪೌಂಡ್‌ನಲ್ಲಿ ಪಕ್ಷಿಗಳಿಗಾಗಿ ಎಸೆಯಲ್ಪಟ್ಟ ಅನ್ನವನ್ನು ತಿನ್ನುತ್ತಿದ್ದ ದೃಶ್ಯ ಆತನ ಅಸಹಾಯಕತೆಯನ್ನು ತೋರುವಂತೆ ಮಾಡಿತ್ತು. ಫಿಲಿಪ್​ ಎಂಬ ರೋಗಿ ಈ ರೀತಿ ಮಾಡಿದ್ದು, ಈತ ಹಲವಾರು ದಿನಗಳಿಂದ ಆಹಾರವಿಲ್ಲದೆ ಹಸಿವಿನಿಂದ ಬಳಲಿದ್ದ ಎನ್ನಲಾಗಿದೆ.

ಇನ್ನು ಆತನ ಕಾಲುಗಳಲ್ಲಿ ರಾಡ್ ಅಳವಡಿಸಲಾಗಿರುವುದರಿಂದ ದೂರ ಸಂಚಾರ ಕಷ್ಟಕರವಾಗಿದೆ. ಈ ಕಾರಣಕ್ಕಾಗಿ ಆತ ಪಕ್ಷಿಗಳಿಗೆ ಇಟ್ಟಿದ್ದ ಆಹಾರವನ್ನೇ ಸೇವಿಸಿದ್ದಾನೆ.

ರಿಮ್ಸ್ ನಿರ್ದೇಶಕ ಡಾ.ಡಿ.ಕೆ.ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ಆ ದೃಶ್ಯಗಳನ್ನು ನೋಡಿದ್ದೇನೆ. ಅದರ ಬಗ್ಗೆ ವಿಚಾರಿಸಿದೆ. ಅಲ್ಲದೆ, ರೋಗಿಯೊಂದಿಗೆ ಯಾರೂ ಸಂಬಂಧಿಕರು ಇರಲಿಲ್ಲವೆ ಎಂಬಿತ್ಯಾದಿ ಮಾಹಿತಿಯನ್ನು ಸಂಬಂಧಿಸಿದವರ ಬಳಿ ಕೇಳಿದ್ದೇನೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details