ಕರ್ನಾಟಕ

karnataka

ETV Bharat / bharat

ಕೊರೊನಾಗೆ ಬಿಜೆಪಿ ಶಾಸಕ ಬಲಿ... ಪತ್ನಿ ಮೃತಪಟ್ಟ ಕೆಲ ದಿನಗಳಲ್ಲೇ ಎಂಎಲ್​ಎ ಸಾವು!

ಕೊರೊನಾ ಸೋಂಕಿಗೆ ಉತ್ತರಾಖಂಡ್​ ಬಿಜೆಪಿ ಶಾಸಕ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಮೃತಪಟ್ಟ ಕೆಲ ದಿನಗಳಲ್ಲೇ ನವದೆಹಲಿಯ ಆಸ್ಪತ್ರೆಯಲ್ಲಿ ಶಾಸಕ ಕೊನೆಯುಸಿರೆಳೆದಿದ್ದಾರೆ.

By

Published : Nov 12, 2020, 8:43 AM IST

Uttarakhand BJP MLA Surendra Singh Jeena die, Uttarakhand BJP MLA Surendra Singh Jeena dies of corona, Uttarakhand BJP MLA Surendra Singh Jeena dies of corona in Delhi, ಕೊರೊನಾಗೆ ಉತ್ತರಾಖಂಡ್​ ಬಿಜೆಪಿ ಶಾಸಕ ಸಾವು, ಕೊರೊನಾಗೆ ಬಿಜೆಪಿ ಶಾಸಕ ಬಲಿ, ದೆಹಲಿಯಲ್ಲಿ ಕೊರೊನಾಗೆ ಉತ್ತರಾಖಂಡ್​ ಬಿಜೆಪಿ ಶಾಸಕ ಸಾವು, ಶಾಸಕ ಸುರೇಂದ್ರ ಸಿಂಗ್ ಜೀನಾ ಸಾವು, ಶಾಸಕ ಸುರೇಂದ್ರ ಸಿಂಗ್ ಜೀನಾ ಸಾವು ಸುದ್ದಿ,
ಕೊರೊನಾಗೆ ಬಿಜೆಪಿ ಶಾಸಕ ಬಲಿ

ನವದೆಹಲಿ:ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್​ ಜೀನಾ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಅಲ್ಮೋರ್​ ಜಿಲ್ಲೆಯ ಸಾಲ್ಟ್​ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್​ ಕೊರೊನಾದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಶ್ರೀ ಗಂಗ್ರಾಮ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ತೀವ್ರ ಶ್ವಾಸಕೋಶ ಸಮಸ್ಯೆಯಿಂದ ಸುರೇಂದ್ರ ಸಿಂಗ್​ ಜೀನಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಸುರೇಂದ್ರ ಸಿಂಗ್​ ಜೀನಾ ಅವರ ಪತ್ನಿ ನೇಹಾ ಜೀನಾ ಕೆಲ ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಈಗ ಸುರೇಂದ್ರ ಸಿಂಗ್​ ಜೀನಾ ಸಾವು ಅವರ ಸಾವಿನಿಂದ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಕೋವಿಡ್ ನಿಯಮಾವಳಿ ಪ್ರಕಾರ ಇಂದು ಸುರೇಂದ್ರ ಸಿಂಗ್​ ಜೀನಾ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ABOUT THE AUTHOR

...view details