ಉತ್ತರ ಪ್ರದೇಶ: ಮಾಜಿ ಸೈನಿಕನ ಮೇಲೆ ಗ್ರಾಮದ ಮುಖ್ಯಸ್ಥರ ಪತಿ ಮತ್ತು ಅವರ ಸಹಚರರು ಗುಂಡಿನ ದಾಳಿ ನಡೆಸಿರುವ ಘಟನೆ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ನಿವೃತ್ತ ಸೈನಿಕ ಯಶ್ವೀರ್ ಸಿಂಗ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೆ ವೈಷಮ್ಯ ಹಿನ್ನೆಲೆ ಉತ್ತರ ಪ್ರದೇಶದಲ್ಲಿ ಮಾಜಿ ಸೈನಿಕನ ಮೇಲೆ ಗುಂಡಿನ ದಾಳಿ
ನಿವೃತ್ತ ಸೈನಿಕನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಾಜಿ ಸೈನಿಕ ಯಶ್ವೀರ್ ಸಿಂಗ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಸಿಂಗ್ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ಹಳೆ ವೈಷಮ್ಯ ಹಿನ್ನೆಲೆ ಉತ್ತರ ಪ್ರದೇಶದಲ್ಲಿ ಮಾಜಿ ಸೈನಿಕನ ಮೇಲೆ ಗುಂಡಿನ ದಾಳಿ
ಈ ಕುರಿತು ಸಿಂಗ್ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಗ್ರಾಮದ ಮುಖ್ಯಸ್ಥರ ಪತಿ ಸಂದೀಪ್ ಮತ್ತು ಅವರ ಬೆಂಬಲಿಗರು ಬುಧವಾರ ಸಂಜೆ ಜಿಲ್ಲೆಯ ಹಸನ್ಪುರ ಗ್ರಾಮದಲ್ಲಿರುವ ಸೈನಿಕನ ಮನೆಗೆ ನುಗ್ಗಿ ಹಳೆ ದ್ವೇಷದ ಹಿನ್ನೆಲೆ ಗುಂಡು ಹಾರಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.