ಕರ್ನಾಟಕ

karnataka

ETV Bharat / bharat

ಪೌರತ್ವ ತಿದ್ದುಪಡಿ ಕಾಯ್ದೆ ರೌಲಟ್​​​​ ಕಾಯ್ದೆಗೆ ಹೋಲಿಸಿದ ಊರ್ಮಿಳಾ ಮಾತೋಂಡ್ಕರ್​​

ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್​ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರೌಲಟ್​​​​ ಕಾಯ್ದೆಗೆ ಹೋಲಿಸಿದ್ದಾರೆ.

By

Published : Jan 31, 2020, 8:31 PM IST

Urmila Matondkar
ಊರ್ಮಿಳಾ ಮಾತೋಂಡ್ಕತ್

ಪುಣೆ: ನಟಿ ಮತ್ತು ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್​​​​ ಪೌರತ್ವ ತಿದ್ದುಪಡಿ ಕಾಯ್ದೆಯನ್ನು 1919ರ ರೌಲಟ್​​​​​​ ಕಾಯ್ದೆಗೆ ಹೋಲಿಸಿದ್ದಾರೆ.

ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದಲ್ಲಿ ಅಶಾಂತಿ ಮತ್ತು ಭೀತಿ ಎದುರಾಗುತ್ತದೆ ಎಂದು ಬ್ರಿಟಿಷರಿಗೆ ತಿಳಿದಿತ್ತು. ಹೀಗಾಗಿ ಅವರು 1919 ರಲ್ಲಿ ರೌಲಟ್​​ ಆಕ್ಟ್ ಎಂದು ಕರೆಯಲ್ಪಡುವ ಕಾನೂನನ್ನು ತಂದು ತಮ್ಮ ಹಿಡಿತವನ್ನ ಬಿಗಿಗೊಳಿಸಿದ್ದರು. ಇದೇ ಮಾದರಿಯಲ್ಲಿ ಸಿಎಎ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ನಟಿ ಊರ್ಮಿಳಾ ಮಾತೋಂಡ್ಕರ್​ ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ ಮಾತೋಂಡ್ಕರ್, ತಿದ್ದುಪಡಿ ಮಾಡಿದ ಪೌರತ್ವ ಕಾನೂನು ಮತ್ತು ರೌಲಟ್ ಕಾಯ್ದೆಯನ್ನು 'ಇತಿಹಾಸದಲ್ಲಿಯೇ ಕಪ್ಪು ಕಾನೂನುಗಳು ಎಂದಿದ್ದಾರೆ.

ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಅಂಗೀಕರಿಸಿದ ರೌಲಟ್​​​ ಆಕ್ಟ್ ಪ್ರಕಾರ, ಬ್ರಿಟಿಷರ ವಿರುದ್ಧ ಯಾರಾದರೂ ಸಂಚು ರೂಪಿಸುತ್ತಿದ್ದಾರೆ ಎಂದು ಭಾವಿಸಿದ್ರೆ ಸಾಕು, ಅವರನ್ನು ಯಾವುದೇ ಸಮಯದಲ್ಲಾದ್ರೂ ಯಾವುದೇ ವಿಚಾರಣೆ ಮಾಡದೇ ಬಂಧಿಸಬಹುದಾಗಿತ್ತು.

ABOUT THE AUTHOR

...view details