ನಾರಾಯಣಪುರ (ಛತ್ತೀಸ್ಗಢ):ಜಿಲ್ಲೆಯಲ್ಲಿ ಶನಿವಾರ ತಲಾ ಒಂದು ಲಕ್ಷ ರೂ.ಗಳ ಇನಾಮು ಹೊಂದಿದ್ದ ಇಬ್ಬರು ನಕ್ಸಲರು ಪೊಲೀಸರ ಮುಂದೆ ಶರಣಾಗುವ ಮೂಲಕ ತಾವು ಮಾಡಿದ ಕೃತ್ಯಗಳನ್ನು ಒಪ್ಪಿಕೊಂಡಿದ್ದಾರೆ.
ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗರ್ಗ್ ಅವರ ಸಮ್ಮುಖದಲ್ಲಿ ಬಾಲ್ದೇವ್ ಮತ್ತು ಜೈರಾಮ್ ಎಂಬ ಇಬ್ಬರು ನಕ್ಸಲರು ಶರಣಾದರು. ಅಲ್ಲದೇ ಇದೇ ವೇಳೆ ಸಾರ್ವಜನಿಕ ಮುಖ್ಯವಾಹಿನಿಗೆ ಬರುವುದಾಗಿ ಇಚ್ಛೆ ವ್ಯಕ್ತಪಡಿಸಿದರು.
ಬಾಲ್ದೇವ್ ಮತ್ತು ಜೈರಾಮ್ ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಕ್ಸಲ್ ವಾಹಿನಿಗೆ ಸೇರಿದ್ದರು. ಟೊಳ್ಳು ಸಿದ್ಧಾಂತದಿಂದ ಬೇಸರಗೊಂಡು ಇದೀಗ ಶರಣಾಗಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿ ಗರ್ಗ್ ಮಾಹಿತಿ ನೀಡಿದರು.
ಬಾಲ್ದೇವ್ 2012 ರಲ್ಲಿ ನಕ್ಸಲ್ ಗುಂಪು ಸೇರಿಕೊಂಡರೆ 15 ನೇ ವಯಸ್ಸಿನಲ್ಲಿ ಜೈರಾಮ್ ಅವನ ಮಾರ್ಗವನ್ನೇ ಅನುಸರಿಸಿದ್ದ. ಇದೀಗ ಅವರು ಮಾಡಿದ ತಪ್ಪು ಅವರಿಗೆ ಅರಿವಾಗಿದೆ. ಎಲ್ಲವನ್ನೂ ಮರೆತು ಶರಣಾಗಲು ನಿರ್ಧರಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗರ್ಗ್ ಹೇಳಿದರು.