ತಿರುವನಂತಪುರಂ:ಬುಡಕಟ್ಟು ಜನಾಂಗದ ಯುವಕನ ಮೇಲೆ ಹುಲಿ ದಾಳಿ ನಡೆಸಿದ್ದು, ಆತನ ದೇಹ ಪುಲ್ಪಲ್ಲಿ ಅರಣ್ಯ ಪ್ರದೇಶದಲ್ಲಿ ಬುಧವಾರದಂದು ಪತ್ತೆಯಾಗಿದೆ.
ಬುಡಕಟ್ಟು ಸಮುದಾಯದ ಯುವಕನ ಮೇಲೆ ಹುಲಿ ದಾಳಿ - ಶಿವಕುಮಾರ್
ಬುಡಕಟ್ಟು ಸಮುದಾಯದ ಯುವಕನ ಮೇಲೆ ಹುಲಿ ದಾಳಿ ನಡೆಸಿದ್ದು, ಮೃತದೇಹ ಪುಲ್ಪಲ್ಲಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಬುಡಕಟ್ಟು ಜನಾಂಗದ ಯುವಕನ ಮೇಲೆ ಹುಲಿ ದಾಳಿ
ಮೃತ ವ್ಯಕ್ತಿ ಶಿವಕುಮಾರ್ ಎಂದು ಗುರುತಿಸಲಾಗಿದೆ.
ಈತ ಮಂಗಳವಾರದಂದು ಕಾಡಿಗೆ ತೆರಳಿದ್ದು, ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದರು. ಆದರೆ, ಬುಧವಾರದಂದು ಕಾಡಿನಲ್ಲಿ ರಕ್ತದ ಗುರುತು ಹಾಗೂ ಕೆಲ ಆಯುಧಗಳು ಕಂಡುಬಂದಿದ್ದವು. ಇವೆಲ್ಲವೂ ದೊರೆತ ಸ್ವಲ್ಪ ದೂರದಲ್ಲಿ ಶಿವಕುಮಾರ್ ಮೃತದೇಹವೂ ಪತ್ತೆಯಾಗಿತ್ತು.