ಮುಂಬೈ: ಭಾರತ ಹಾಗೂ ಚೀನಾ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷದ ಬೆನ್ನಲ್ಲೇ ಚೀನಾ ವಸ್ತುಗಳನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಕೂಗು ವ್ಯಾಪಕವಾಗುತ್ತಿದೆ. ಆದರೆ, ದೇಶದ ಜನತೆಯ ಭಾವನೆಗಳಿಗೆ ವಿರುದ್ಧವಾಗಿ ಮಹಾರಾಷ್ಟ್ರ ಸರಕಾರ, ಚೀನಾ ಕಂಪನಿಗಳು ತನ್ನ ರಾಜ್ಯದಲ್ಲಿ ಬಂಡವಾಳ ಹೂಡಲು ಕೆಂಪು ಹಾಸಿನ ಸ್ವಾಗತ ನೀಡುತ್ತಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಮಹಾರಾಷ್ಟ್ರದಲ್ಲಿ 5 ಸಾವಿರ ಕೋಟಿ ರೂ. ಬಂಡವಾಳ ಹೂಡಲಿವೆ ಈ ಚೀನಾ ಕಂಪನಿಗಳು!
ಜೂನ್ 15 ರಂದು ಚೀನಾ ಸೈನಿಕರ ದುರಾಕ್ರಮಣಕ್ಕೆ 20 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಚೀನಾ ತನ್ನ ದುಸ್ಸಾಹಸ ಮುಂದುವರೆಸಿದೆ. ಈ ಮಧ್ಯೆ ಚೀನಾದೊಂದಿಗಿನ ಎಲ್ಲ ಆರ್ಥಿಕ ವ್ಯವಹಾರಗಳನ್ನು ನಿಲ್ಲಿಸಬೇಕು ಎಂದು ಜನತೆ ಮಾತ್ರವಲ್ಲದೇ ಹಣಕಾಸು ತಜ್ಞರು ಸಹ ಆಗ್ರಹಿಸುತ್ತಿದ್ದಾರೆ. ಆದರೂ ಚೀನಾ ಕಂಪನಿಗಳ ಬಂಡವಾಳವನ್ನು ಸ್ವಾಗತಿಸುತ್ತಿರುವ ಮಹಾರಾಷ್ಟ್ರ ಸರಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ.
ಮ್ಯಾಗ್ನೆಟಿಕ್ ಮಹಾರಾಷ್ಟ್ರ ಯೋಜನೆಯಡಿ ಚೀನಾದ ಮೂರು ಕಂಪನಿಗಳು ಮಹಾರಾಷ್ಟ್ರದಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಬಂಡವಾಳ ಹೂಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಪುಣೆಯ ತೇಲ್ಗಾಂವನಲ್ಲಿ ಹೆಂಗ್ಲಿ (ಚೀನಾ) ಎಂಜಿನಿಯರಿಂಗ್ 250 ಕೋಟಿ ರೂ., ಪಿಎಂಐ ಎಲೆಕ್ಟ್ರೊ ಮೊಬಿಲಿಟಿ (ಚೀನಾ) ಆಟೊ 1000 ಕೋಟಿ ರೂ. ಹಾಗೂ ಗ್ರೇಟ್ ವಾಲ್ ಮೋಟರ್ಸ್ (ಚೀನಾ) ಆಟೊಮೊಬೈಲ್ ಕಂಪನಿಯು 3,770 ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದಾಗಿವೆ.
ಜೂನ್ 15 ರಂದು ಚೀನಾ ಸೈನಿಕರ ದುರಾಕ್ರಮಣಕ್ಕೆ 20 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಚೀನಾ ತನ್ನ ದುಸ್ಸಾಹಸವನ್ನು ಮುಂದುವರೆಸಿದೆ. ಈ ಮಧ್ಯೆ ಚೀನಾದೊಂದಿಗಿನ ಎಲ್ಲ ಆರ್ಥಿಕ ವ್ಯವಹಾರಗಳನ್ನು ನಿಲ್ಲಿಸಬೇಕು ಎಂದು ಜನತೆ ಮಾತ್ರವಲ್ಲದೇ ಹಣಕಾಸು ತಜ್ಞರು ಸಹ ಆಗ್ರಹಿಸುತ್ತಿದ್ದಾರೆ. ಆದರೂ ಚೀನಾ ಕಂಪನಿಗಳ ಬಂಡವಾಳವನ್ನು ಸ್ವಾಗತಿಸುತ್ತಿರುವ ಮಹಾರಾಷ್ಟ್ರ ಸರಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಚೀನಾವನ್ನು ಆರ್ಥಿಕವಾಗಿಯೇ ಎದುರಿಸಿ ಅದನ್ನು ಮಣಿಸುವುದು ಸಾಧ್ಯ ಎಂಬುದು ಬಹುತೇಕರ ವಾದವಾಗಿದೆ.