ಕರ್ನಾಟಕ

karnataka

ETV Bharat / bharat

ಪೌರತ್ವ ಕಾಯ್ದೆ ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ನೀತಿಗಳ ಭಾಗವಲ್ಲ: ಕೇರಳ ರಾಜ್ಯಪಾಲ - ರಿಕಾಲ್ ಗವರ್ನರ್

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬಜೆಟ್ ಅಧಿವೇಶನಕ್ಕೆ ವಿಧಾನಸಭೆಗೆ ಬಂದ ವೇಳೆ ಯುಡಿಎಫ್ ಶಾಸಕರು ರಾಜ್ಯಪಾಲರ ವಿರುದ್ಧ 'ರಿಕಾಲ್​ ಗವರ್ನರ್'​ ಎಂಬ ಘೋಷಣೆ ಕೂಗಿದರು.

UDF MLAs block Kerala Governor
ವಿಧಾನಸಭೆಯಲ್ಲಿ ಗವರ್ನರ್​ ಎದುರು ಪ್ರತಿಭಟಿಸುತ್ತಿರುವ ಶಾಸಕರು

By

Published : Jan 29, 2020, 10:45 AM IST

ತಿರುವನಂತಪುರಂ(ಕೇರಳ): ಕೇರಳ ವಿಧಾನಸಭೆಯಲ್ಲಿ ಬಜೆಟ್​​ ಅಧಿವೇಶನದ ಮೊದಲ ದಿನ ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯ್ತು. ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗು ಎನ್‌ಆರ್‌ಸಿ ಬಗ್ಗೆ ಕೇಂದ್ರದ ನಿಲುವಿಗಂಟಿರುವ ರಾಜ್ಯಪಾಲರು ಅಧಿವೇಶನಕ್ಕೆ ಬರ್ತಿದ್ದಂತೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶಾಸಕರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಸದನವನ್ನುದ್ದೇಶಿಸಿ ಮಾತನಾಡುತ್ತಿರುವ ರಾಜ್ಯಪಾಲರು

ಬಳಿಕ ಸದನವನ್ನುದ್ದೇಶಿಸಿ ​​ಮಾತನಾಡಿದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್, ಸಿಎಂ ನನಗೆ ತಿಳಿಸಿದಂತೆ ಮೊದಲು ಸಿಎಎ ಬಗ್ಗೆ ಓದುತ್ತೇನೆ, ಈ ಬಗ್ಗೆ ನನಗೆ ಪ್ರತ್ಯೇಕವಾದ ನಿಲುವುಗಳಿವೆ. ಯಾಕೆಂದರೆ, ಸಿಎಎ ವಿಚಾರ ಸರ್ಕಾರದ ಕಾರ್ಯಕ್ರಮಗಳು, ನೀತಿಗಳ ಭಾಗವಲ್ಲ. ಆದ್ರೆ, ಇದು ಸರ್ಕಾರದ ನಿಲುವು ಆಗಿದೆ. ಹಾಗಾಗಿ ಸರ್ಕಾರದ ದೃಷ್ಠಿಕೋನ ಮತ್ತು ಆಶಯವನ್ನು ಗೌರವಿಸುವ ಉದ್ದೇಶದಿಂದಷ್ಟೇ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಓದುವುದಾಗಿ ಅವರು ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಗವರ್ನರ್​ ಎದುರು ಪ್ರತಿಭಟಿಸುತ್ತಿರುವ ಶಾಸಕರು

ಇದಕ್ಕೂ ಮುನ್ನ ರಾಜ್ಯಪಾಲರು ವಿಧಾನಸಭೆಗೆ ಬರುತ್ತಿದ್ದಂತೆ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಪಕ್ಷದ ಶಾಸಕರು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ್ರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಎದುರು ನಿಂತು 'ರಿಕಾಲ್ ಗವರ್ನರ್' ಎಂಬ ಘೋಷಣೆಗಳನ್ನು ಕೂಗಿ, ರಾಜ್ಯಪಾಲರನ್ನು ಅಡ್ಡಗಟ್ಟಿದ್ದಾರೆ.

ರಾಜ್ಯಪಾಲದೊಂದಿಗೆ ಸಿಎಂ ಪಿಣರಾಯಿ ವಿಜಯನ್ ಸಹ ಆಗಮಿಸಿದ್ದು, ಸದನದಲ್ಲಿ ಯುಡಿಎಫ್ ಶಾಸಕರು ಪ್ರತಿಭಟನೆ ಮಾಡುವ ವೇಳೆ ರಾಜ್ಯಪಾಲರ ಜೊತೆಯಲ್ಲಿಯೇ ನಿಂತಿದ್ದರು. ಈ ಬಳಿಕ ಮಾರ್ಷಲ್​ ಎಸ್ಕಾರ್ಟ್​ಗಳ ಸಹಾಯದಿಂದ ರಾಜ್ಯಪಾಲರು ತಮ್ಮ ಸ್ಥಾನದ ಬಳಿ ತೆರಳಿದ್ದು, ಯುಡಿಎಫ್ ಶಾಸಕರು ಮಾತ್ರ ರಿಕಾಲ್​ ಗವರ್ನರ್​​ ಎಂಬ ಘೋಷಣೆಯನ್ನು ಕೂಗುತ್ತಲೇ ಇದ್ದರು.

ABOUT THE AUTHOR

...view details