ಕೊಚ್ಚಿ(ಕೇರಳ):ನಟ ಶೇನ್ ನಿಗಮ್ ಮತ್ತು ಕೇರಳ ಚಲನಚಿತ್ರ ನಿರ್ಮಾಪಕರ ಸಂಘದ ನಡುವಿನ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಖ್ಯಾತ ನಟ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಎಎಂಎಂಎ) ಅಧ್ಯಕ್ಷ ಮೋಹನ್ ಲಾಲ್ ತಿಳಿಸಿದ್ದಾರೆ.
ಶೇನ್ ನಿಗಂ ಮತ್ತು ನಿರ್ಮಾಪಕರ ಸಂಘದ ನಡುವಿನ ಕಿತ್ತಾಟ ಇತ್ಯರ್ಥಪಡಿಸಿದ ನಟ ಮೋಹನ್ ಲಾಲ್
ನಟ ಶೇನ್ ನಿಗಂ ಮತ್ತು ನಿರ್ಮಾಪಕರ ಸಂಘದ ನಡುವಿನ ಸಮಸ್ಯೆಯನ್ನು ಮಲಯಾಳಂ ಹಿರಿಯ ನಟ ಮೋಹನ್ ಲಾಲ್ ಬಗೆಹರಿಸಿದ್ದಾರೆ. ಅಲ್ಲದೆ, ಉಲ್ಲಾಸಂ ಚಿತ್ರದ ಡಬ್ಬಿಂಗ್ ಅನ್ನು ಶೇನ್ ಪೂರ್ಣಗೊಳಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಟ ಮೋಹನ್ ಲಾಲ್
ಉಲ್ಲಾಸಂ ಚಿತ್ರದ ಡಬ್ಬಿಂಗ್ ಅನ್ನು ಶೇನ್ ಪೂರ್ಣಗೊಳಿಸಲಿದ್ದಾರೆ ಎಂದು ಎಎಂಎಂಎ ಕಾರ್ಯನಿರ್ವಾಹಕ ಸಭೆಯ ನಂತರ ಅವರು ತಿಳಿಸಿದ್ದಾರೆ. ಉಲ್ಲಾಸಂ ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸದ ಹೊರತು ಶೇನ್ ಅವರೊಂದಿಗೆ ಸಹಕರಿಸುವುದಿಲ್ಲ ಎಂದು ನಿರ್ಮಾಪಕರ ಸಂಘ ಈ ಹಿಂದೆ ತಿಳಿಸಿತ್ತು.