ಕರ್ನಾಟಕ

karnataka

ETV Bharat / bharat

ಭಯೋತ್ಪಾದಕರ ಸಹಚರನನ್ನು ಬಂಧಿಸಿದ ಪೊಲೀಸರು: ಚೀನೀ ’ಕೈ ಗ್ರೆನೇಡ್’ ವಶ

ಜಮ್ಮು ಮತ್ತು ಕಾಶ್ಮೀರದ ಟ್ರಾಲ್‌ನಲ್ಲಿ ಶುಕ್ರವಾರ ಭಯೋತ್ಪಾದಕ ಸಹಚರನನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಅವನನ್ನು ಅಮೀರ್ ಅಶ್ರಫ್ ಖಾನ್ ಎಂದು ಗುರುತಿಸಲಾಗಿದೆ.

By

Published : Dec 25, 2020, 3:29 PM IST

ಭಯೋತ್ಪಾದಕ ಸಹಚರನನ್ನು ಬಂಧಿಸಿದ ಪೊಲೀಸರು
ಭಯೋತ್ಪಾದಕ ಸಹಚರನನ್ನು ಬಂಧಿಸಿದ ಪೊಲೀಸರು

ಅವಂತಿಪೋರಾ (ಜಮ್ಮು ಮತ್ತು ಕಾಶ್ಮೀರ): ಅವಂತಿಪೋರಾದ ಸೈದಾಬಾದ್ ಟ್ರಾಲ್ ಗ್ರಾಮದಲ್ಲಿ ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸುವಾಗ ಭಯೋತ್ಪಾದಕ ಸಹಚರನನ್ನು ಬಂಧಿಸಲಾಗಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಆತನನ್ನು ಸೈದಾಬಾದ್ ಪಸ್ತುನಾ ನಿವಾಸಿ ಅಮೀರ್ ಅಶ್ರಫ್ ಖಾನ್ ಎಂದು ಗುರುತಿಸಲಾಗಿದೆ. ಆತನ ಬಳಿಯಿದ್ದ ಚೀನಾದ ಕೈ ಗ್ರೆನೇಡ್​ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅವಂತಿಪೋರಾ ಪೊಲೀಸರು 42 ರಾಜಸ್ಥಾನ್ ರೈಫಲ್ಸ್ (ಆರ್​​ಆರ್) ಮತ್ತು 180 ಬಿಎನ್ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್​​ಎಫ್)ನೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

"ಮಾಹಿತಿ ಮೇರೆಗೆ ಅವಂತಿಪೋರಾ ಪೊಲೀಸರು ಇಂದು ಬೆಳಗ್ಗೆ 42 ಆರ್​​ಆರ್ ಮತ್ತು 180 ಬಿಎನ್ ಸಿಆರ್​ಪಿಎಫ್ ನೆರವಿನೊಂದಿಗೆ ಸೈದಾಬಾದ್ ಟ್ರಾಲ್ ಗ್ರಾಮದ ನಿರ್ದಿಷ್ಟ ಮನೆಯೊಂದರಲ್ಲಿ ಶೋಧಕಾರ್ಯ ನಡೆಸಿದ್ದಾರೆ" ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓದಿ:ನಾಲ್ವರು ಮಕ್ಕಳು, ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

"ಶೋಧದ ಸಮಯದಲ್ಲಿ ಸೈದಾಬಾದ್ ಪಸ್ತುನಾ ನಿವಾಸಿ ಮೊಹಮ್ಮದ್ ಅಶ್ರಫ್ ಖಾನ್ ಅವರ ಪುತ್ರ ಅಮೀರ್ ಅಶ್ರಫ್ ಖಾನ್ ಭಯೋತ್ಪಾದಕ ಸಹಚರ ಎಂದು ಗುರುತಿಸಲಾಗಿದೆ. ಆತನ ಬಳಿ ಇದ್ದ ಒಂದು ಚೀನೀ ಕೈ ಗ್ರೆನೇಡ್​ ಅನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಟ್ರಾಲ್ ಪೊಲೀಸ್ ಠಾಣೆಯಲ್ಲಿ ಭಯೋತ್ಪಾದಕ ಸಹಚರನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ABOUT THE AUTHOR

...view details