ಕರ್ನಾಟಕ

karnataka

ತೆಲಂಗಾಣ: ಸುದೀರ್ಘ ಲಾಕ್ ಡೌನ್ ಬಳಿಕ ದೇವಾಲಯಗಳು, ಶಾಪಿಂಗ್ ಮಾಲ್‌ಗಳು ಮತ್ತೆ ಆರಂಭ

ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ, ತೆಲಂಗಾಣದಲ್ಲಿ ಇಂದು ದೇವಾಲಯಗಳು ಮತ್ತು ಶಾಪಿಂಗ್ ಮಾಲ್‌ಗಳು ತೆರೆದಿವೆ.

By

Published : Jun 8, 2020, 6:18 PM IST

Published : Jun 8, 2020, 6:18 PM IST

temple
temple

ಹೈದರಾಬಾದ್ (ತೆಲಂಗಾಣ): ಸುದೀರ್ಘ ಲಾಕ್ ಡೌನ್ ಬಳಿಕ ತೆಲಂಗಾಣದಲ್ಲಿ ಇಂದು ದೇವಾಲಯಗಳು ಮತ್ತು ಶಾಪಿಂಗ್ ಮಾಲ್‌ಗಳು ತೆರೆದಿವೆ.

ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಲಾಗಿದೆ.

ಭಕ್ತರ ದರ್ಶನಕ್ಕಾಗಿ ದೇವಾಲಯಗಳನ್ನು ಮತ್ತೆ ತೆರೆಯಲಾಗಿದೆ, ಆದರೆ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹೈದರಾಬಾದ್‌ನ ಭಗವಾನ್ ವೆಂಕಟೇಶ್ವರ ದೇವಸ್ಥಾನ, ಭದ್ರಾಚಲಂನ ಶ್ರೀ ರಾಮ ದೇವಸ್ಥಾನ ಮತ್ತು ಯಾದಾದ್ರಿಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಸೇರಿದಂತೆ ಪ್ರಸಿದ್ಧ ದೇವಾಲಯಗಳು ಮತ್ತೆ ತೆರೆದಿವೆ.

ಥರ್ಮಲ್ ಸ್ಕ್ರೀನಿಂಗ್ ಮತ್ತು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಿದ ನಂತರವೇ ಭಕ್ತರಿಗೆ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ.

ಕಂಟೈನ್‌ಮೆಂಟ್ ವಲಯಗಳಲ್ಲಿ ಹೊರತುಪಡಿಸಿ ಉಳಿದೆಡೆ ಧಾರ್ಮಿಕ ಸ್ಥಳಗಳು, ಸಾರ್ವಜನಿಕರಿಗೆ ಪ್ರಾರ್ಥನಾ ಸ್ಥಳಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ABOUT THE AUTHOR

...view details