ಕರ್ನಾಟಕ

karnataka

ಪೊಲೀಸರು-ಅರಣ್ಯ ಅಧಿಕಾರಿಗಳ ಮೇಲೆ ಟಿಆರ್​ಎಸ್​ ಕಾರ್ಯಕರ್ತರಿಂದ ದಾಳಿ!

ತೆಲಂಗಾಣ ರಾಷ್ಟ್ರೀಯ ಸಮಿತಿ ಕಾರ್ಯಕರ್ತರು ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ.

By

Published : Jun 30, 2019, 2:12 PM IST

Published : Jun 30, 2019, 2:12 PM IST

ಟಿಆರ್​ಎಸ್​ ಕಾರ್ಯಕರ್ತರಿಂದ ದಾಳಿ

ಕೊಮರಾಮ್ ಭೀಮ್: ಸಸ್ಯಗಳನ್ನ ನೆಡುವ ಅಭಿಯಾನದ ವೇಳೆ ತೆಲಂಗಾಣ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ತೆಲಂಗಾಣ ರಾಷ್ಟ್ರೀಯ ಸಮಿತಿ ಕಾರ್ಯಕರ್ತರು ನಿನ್ನೆ ದಾಳಿ ಮಾಡಿ ಕಟ್ಟಿಗೆಗಳಿಂದ ಥಳಿಸಿದ್ದಾರೆ.

ಘಟನೆಯಲ್ಲಿ ತೆಲಂಗಾಣದ ಮಹಿಳಾ ಫಾರೆಸ್ಟ್​ ರೇಂಜರ್​ ಆಧಿಕಾರಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಆರ್​ಎಸ್​ ಶಾಸಕ ಕೊನೆರು ಕೋಣಪ್ಪ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೃಷ್ಣ ಎಂಬುವವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಸಿರ್​ಪುರ್ ಕಾಗಜ್​ನಗರದ ಬಳಿ ಟಿಆರ್​ಸ್​ ಮುಖಂಡರ ಭೂಮಿ ಎಂದು ಹೇಳಲಾಗುವ ಜಾಗದಲ್ಲಿ ಸಸಿಗಳನ್ನ ನೆಡಲು ಪ್ರಯತ್ನಿಸಿದ್ದಕ್ಕೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಟಿಆರ್​ಎಸ್ ನಾಯಕ, ಅರಣ್ಯ ಇಲಾಖೆ, ಆದಿವಾಸಿ ರೈತರನ ಬೆದರಿಸಿ ಅವರ ಭೂಮಿಯನ್ನು ಬಲವಂತವಾಗಿ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಅರಣ್ಯ ಅಧಿಕಾರಿಗಳು ಬೆಳೆಗಳನ್ನು ನಾಶಪಡಿಸುತ್ತಿರುವುದರಿಂದ ಸಮಸ್ಯೆಯನ್ನು ಪರಿಹರಿಸಲು ಮತ್ತು ಬುಡಕಟ್ಟು ಜನಾಂಗಕ್ಕೆ ನ್ಯಾಯ ಒದಗಿಸಲು ನಾನು ಅಲ್ಲಿಗೆ ಹೋಗಿದ್ದೆ. ನಾನು ಅಧಿಕಾರಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ ಆದರೆ ಆಕಸ್ಮಿಕವಾಗಿ ದಾಳಿ ನಡೆದಿದೆ, ಉದ್ದೇಶಪೂರ್ವಕವಾಗಿ ಆಗಿಲ್ಲ ಎಂದು ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details