ಕರ್ನಾಟಕ

karnataka

ETV Bharat / bharat

ವಿದ್ಯಾರ್ಥಿಗಳಿಬ್ಬರಿಗೆ ಅಮಾನವೀಯ ರೀತಿ ಥಳಿಸಿದ ಶಿಕ್ಷಕಿ... ವಿಡಿಯೋ ವೈರಲ್​

ವಿದ್ಯಾರ್ಥಿಗಳಿಬ್ಬರ ಮೇಲೆ ಶಾಲಾ ಶಿಕ್ಷಕಿ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್​​ ಆಗಿದ್ದು, ಅದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

By

Published : Sep 1, 2020, 6:45 PM IST

Teacher trash
Teacher trash

ಬಾಗಪತ್​​(ಉತ್ತರಪ್ರದೇಶ): ಶಾಲಾ ಶಿಕ್ಷಕಿವೋರ್ವಳು ಇಬ್ಬರು ವಿದ್ಯಾರ್ಥಿಗಳ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್​​​ ಆಗಿದೆ.

ಉತ್ತರ ಪ್ರದೇಶದ ಬಾಗಪತ್​​ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಇದರ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡ್ತಿದ್ದು, ಶಿಕ್ಷಕಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.

ವಿದ್ಯಾರ್ಥಿಗಳಿಬ್ಬರಿಗೆ ಅಮಾನವೀಯ ರೀತಿ ಥಳಿಸಿದ ಶಿಕ್ಷಕಿ

ಯಾವ ಶಾಲೆಗೆ ಸೇರಿದ ವಿದ್ಯಾರ್ಥಿಗಳು ಹಾಗೂ ಯಾವಾಗ ಘಟನೆ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ವಿಡಿಯೋದಲ್ಲಿ ಇಬ್ಬರು ವಿದ್ಯಾರ್ಥಿಗಳ ಮೇಲೆ ಶಿಕ್ಷಕಿ ಕೋಲಿನಿಂದ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ. ತರಗತಿಯ ವಿದ್ಯಾರ್ಥಿವೋರ್ವ ಇದರ ವಿಡಿಯೋ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ. ವಿದ್ಯಾರ್ಥಿಗಳಿಬ್ಬರು ಅಶ್ಲೀಲವಾಗಿ ಸಂದೇಶ ರವಾನೆ ಮಾಡಿದ್ದಕ್ಕಾಗಿ ಈ ರೀತಿಯಾಗಿ ಹೊಡೆದಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

ABOUT THE AUTHOR

...view details