ಕರ್ನಾಟಕ

karnataka

ETV Bharat / bharat

ಪ್ರಜ್ಞಾ ಬಾಳಿಗೆ ಬೆಳಕಾದ ಸೋನು: ಕಾಲಿನ ಶಸ್ತ್ರಚಿಕಿತ್ಸೆಗೆ ಸಹಾಯಧನ ನೀಡಿದ ಸೂದ್​ - ಉತ್ತರಪ್ರದೇಶ

ಅಪಘಾತದಲ್ಲಿ ಮೊಣಕಾಲುಗಳಿಗೆ ಗಂಭೀರವಾಗಿ ಗಾಯಗಳಾದ ಹಿನ್ನೆಲೆಯಲ್ಲಿ ಸುಮಾರು ಆರು ತಿಂಗಳ ಕಾಲ ಹಾಸಿಗೆ ಹಿಡಿದಿದ್ದ ಉತ್ತರಪ್ರದೇಶದ ಯುವತಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಧನಸಹಾಯ ಮಾಡಿ ಸೋನು ಸೂದ್​ ಮತ್ತೆ ಮಾನವೀಯತೆ ಪ್ರದರ್ಶಿಸಿದ್ದಾರೆ.

ಸೋನು ಸೂದ್​
ಸೋನು ಸೂದ್​

By

Published : Aug 14, 2020, 2:19 PM IST

ಗೋರಖ್‌ಪುರ: ಅಪಘಾತದಲ್ಲಿ ಮೊಣಕಾಲುಗಳಿಗೆ ಗಂಭೀರವಾಗಿ ಗಾಯಗಳಾದ ಹಿನ್ನೆಲೆಯಲ್ಲಿ ಸುಮಾರು ಆರು ತಿಂಗಳ ಕಾಲ ಹಾಸಿಗೆ ಹಿಡಿದಿದ್ದ ಉತ್ತರಪ್ರದೇಶದ ಯುವತಿಗೆ ಸಹಾಯ ಮಾಡಲು ಸೋನು ಸೂದ್​ ಮುಂದಾಗಿದ್ದಾರೆ.

ಫೆಬ್ರವರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪ್ರಜ್ಞಾ (22) ಗಂಭೀರವಾಗಿ ಗಾಯಗೊಂಡಿದ್ದಳು. ಅಷ್ಟೇ ಅಲ್ಲದೆ ಘಟನೆಯಲ್ಲಿ ಮೊಣಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸುಮಾರು 6 ತಿಂಗಳವರೆಗೆ ಹಾಸಿಗೆ ಹಿಡಿದಿದ್ದಳು. ಶಸ್ತ್ರ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಎಂದು ವೈದ್ಯರು ತಿಳಿಸಿದ್ದರು. ಆದರೆ, ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ಕೊಡಿಸುವಷ್ಟು ಸ್ಥಿತಿವಂತರಾಗಿರಲಿಲ್ಲ.

ಇನ್ನು ಈ ಘಟನೆಯ ಕುರಿತು ಆಗಸ್ಟ್ ಮೊದಲ ವಾರದಲ್ಲಿ, ಪ್ರಜ್ಞಾಳ ತಂದೆ ವಿಜಯ್​ ಮಿಶ್ರಾ ಸಹಾಯಕ್ಕಾಗಿ ನಟ ಸೋನು ಸೂದ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಇದಾದ ಬಳಿಕ ಸೋನು ಸಹಾಯದ ಹಸ್ತ ನೀಡಿದ್ದು, ದೆಹಲಿಯಲ್ಲಿ ವೈದ್ಯರ ಜೊತೆ ಮಾತನಾಡಿ ಆಕೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.

ಸದ್ಯ ಗಾಜಿಯಾಬಾದ್​ನಲ್ಲಿ ಪ್ರಜ್ಞಾಳ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದ್ದು, ಎರಡು ಮೂರು ದಿನದಲ್ಲಿ ಡಿಸ್ಚಾರ್ಜ್​ ಆಗಲಿದ್ದಾರೆ.

ಇನ್ನು ಈ ಕುರಿತು ಟ್ವೀಟ್​ ಮಾಡಿದ್ದ ಸೋನು, ವೈದ್ಯರೊಂದಿಗೆ ಮಾತನಾಡಿದ್ದೇನೆ. ನಿಮ್ಮ ಪ್ರಯಾಣದ ಖರ್ಚು ಹಾಗೂ ಆಕೆಯ ಚಿಕಿತ್ಸಾ ವೆಚ್ಚವನ್ನು ಭರಿಸುತ್ತೇನೆ. ಶೀಘ್ರದಲ್ಲೇ ಗುಣಮುಖರಾಗಿ, ದೇವರ ಆಶೀರ್ವಾದ ಇರಲಿ" ಎಂದು ಹೇಳಿದ್ದಾರೆ.

ಈ ಬಗ್ಗೆ ವಿಜಯ್​ ಮಿಶ್ರಾ ಮಾತನಾಡಿ, "ರೈಲು ಟಿಕೆಟ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸೋನು ಸೂದ್ ಮಾಡಿದ್ದರು. ನಾವು ದೆಹಲಿಗೆ ತಲುಪಿದಾಗ, ಸೋನು ಸೂದ್ ಅವರ ತಂಡವು ರೈಲ್ವೆ ನಿಲ್ದಾಣದಲ್ಲಿ ನಮ್ಮನ್ನು ಭೇಟಿಯಾಗಿ ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಿತು. ಸೋನು ಸೂದ್ ನಮಗೆ ದೇವರಂತೆ. ಅಂತವರನ್ನು ಈ ದಿನಗಳಲ್ಲಿ ಕಾಣುವುದು ಕಷ್ಟ. ಅವರಿಗಾಗಿ ನೀಡಲು ನನ್ನ ಬಳಿ ಏನೂ ಇಲ್ಲ, ಆದರೆ, ನಾನು ಅವರಿಗೆ ಆಶೀರ್ವಾದ ಮಾಡುತ್ತೇನೆ. ಅವರಿಗೆ ಹೆಚ್ಚಿನ ಸಂತೋಷ ಮತ್ತು ಉಜ್ವಲ ಭವಿಷ್ಯ ಕರುಣಿಸಲಿ" ಎಂದು ಹೇಳಿದರು.

ಸೋನು ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಪ್ರಜ್ಞಾ ಅವರು, "ನನಗೆ, ಸೋನು ಸೂದ್ ದೇವರು. ನಾನು ದುಡಿಯಲು ಪ್ರಾರಂಭಿಸಿದಾಗ, ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಸಹಾಯ ಮಾಡುತ್ತೇನೆ ಎಂದು ನಿರ್ಧರಿಸಿದ್ದೇನೆ" ಎಂದು ಹೇಳಿದರು.

ABOUT THE AUTHOR

...view details