ಕರ್ನಾಟಕ

karnataka

ETV Bharat / bharat

ರಾಜನಾಥ್​ ಸಿಂಗ್​ ವಿರುದ್ಧ ಶತೃಘ್ನ ಸಿನ್ಹಾ ಪತ್ನಿ ಕಣಕ್ಕೆ... ಬಿಎಸ್ಪಿ, ಕಾಂಗ್ರೆಸ್​ನಿಂದಲೂ ಸಪೋರ್ಟ್​!

ಬಿಜೆಪಿ ಫೈಯರ್​ ಬ್ರ್ಯಾಂಡ್​ ಎಂದು ಗುರುತಿಸಿಕೊಂಡಿದ್ದ ಶತೃಘ್ನ ಸಿನ್ಹಾ ಪತ್ನಿ ರಾಜನಾಥ್​ ಸಿಂಗ್ ವಿರುದ್ಧ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಇವರಿಗೆ ಬಿಎಸ್ಪಿ ಹಾಗೂ ಕಾಂಗ್ರೆಸ್​ ಸಪೋರ್ಟ್​ ಮಾಡಲು ಮುಂದಾಗಿದೆ.

By

Published : Apr 4, 2019, 6:49 PM IST

ರಾಜನಾಥ್​ ಸಿಂಗ್​, ಪೂನಂ ಸಿನ್ಹಾ

ಲಖನೌ:ಬಂಡಾಯ ನಾಯಕ, ನಟ, ಪ್ರಧಾನಿ ಮೋದಿ ವಿರುದ್ಧ ತನ್ನ ಅಸಮಾಧಾನ ಹೊರಹಾಕುತ್ತಾ ಬಿಜೆಪಿ ತೊರೆದಿರುವ ಶತೃಘ್ನ ಸಿನ್ಹಾ ಈಗಾಗಲೇ ಕಾಂಗ್ರೆಸ್​ ಸೇರಿಯಾಗಿದೆ. ಇದರ ಮಧ್ಯೆ ಅವರ ಪತ್ನಿ ಕೂಡ ಗಂಡನಿಗೆ ಸಾಥ್​ ನೀಡಲು ಮುಂದಾಗಿದ್ದಾರೆ.

ಗೃಹ ಸಚಿವ ರಾಜನಾಥ್​ ಸಿಂಗ್ ಸ್ಪರ್ಧೆ ಮಾಡುವ ಲಖನೌ ಸಂಸದೀಯ ಕ್ಷೇತ್ರದಿಂದ ಪೂನಂ ಸಿನ್ಹಾ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪೂನಂ ಮುಂದಾಗಿದ್ದು, ಅವರಿಗೆ ಬಹುಜನ ಸಮಾಜವಾದಿ ಪಕ್ಷ ಕೂಡ ಸಾಥ್​ ನೀಡಲಿದೆ. ಇನ್ನು ಕಾಂಗ್ರೆಸ್​ ಕೂಡ ಯಾವುದೇ ಅಭ್ಯರ್ಥಿಯನ್ನ ಈ ಕ್ಷೇತ್ರದಿಂದ ಕಣಕ್ಕಿಳಿಸದಿರಲು ನಿರ್ಧರಿಸಿದೆ.

ಲಖನೌ ಪ್ರದೇಶದಲ್ಲಿ 1.3 ಲಕ್ಷ ಸಿದ್ದಿ ವೋಟರ್ಸ್​ ಹಾಗೂ 3.5 ಲಕ್ಷ ಮುಸ್ಲಿಮ್​ ಮತದಾರರಿದ್ದಾರೆ. ಇದು ಪೂನಂಗೆ ಫ್ಲಸ್​ ಪಾಯಿಂಟ್ ಆಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಜತೆಗೆ ರಾಜನಾಥ್​ ಸಿಂಗ್​ಗೆ ಬಿಗ್​ ಫೈಟ್​ ನೀಡಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಪಾಟ್ನಾಸಾಹೀಬ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿ ಗೆದ್ದಿದ್ದ ಶತೃಘ್ನ ಸಿನ್ಹಾ, ಈ ಬಾರಿ ಕಾಂಗ್ರೆಸ್ ನಿಂದ ಅಖಾಡಕ್ಕಿಳಿದಿದ್ದಾರೆ.

ABOUT THE AUTHOR

...view details