ಕರ್ನಾಟಕ

karnataka

ETV Bharat / bharat

ಏಕರೂಪ ಶಿಕ್ಷಣ ನೀತಿ ಜಾರಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​​

6 ರಿಂದ 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಏಕರೂಪದ ಶಿಕ್ಷಣ ನೀತಿ ಅಥವಾ ಏಕರೂಪದ ಪಠ್ಯಕ್ರಮ ಜಾರಿಗೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

By

Published : Jul 17, 2020, 1:01 PM IST

supreme
supreme

ನವದೆಹಲಿ:ದೇಶಾದ್ಯಂತ 6ರಿಂದ 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಏಕರೂಪದ ಶಿಕ್ಷಣ ನೀತಿ ಅಥವಾ ಏಕರೂಪದ ಪಠ್ಯಕ್ರಮ ಜಾರಿ ಮಾಡಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯೆ ಮತ್ತು ವಕೀಲೆ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಮನವಿಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಭಾರತೀಯ ಪ್ರೌಢಶಿಕ್ಷಣ ಮಂಡಳಿಗಳನ್ನು (ಐಸಿಎಸ್‌ಇ) ವಿಲೀನಗೊಳಿಸುವಂತೆ ಕೋರಲಾಗಿತ್ತು.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಇದು ನ್ಯಾಯಾಲಯದ ಕಾರ್ಯಗಳಲ್ಲ. ಸುಪ್ರೀಂಕೋರ್ಟ್ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

"ಅರ್ಜಿದಾರರು ತಮ್ಮ ಕುಂದು ಕೊರತೆಗಳೊಂದಿಗೆ ಸರ್ಕಾರವನ್ನು ಸಂಪರ್ಕಿಸಲಿ" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

"ಅಗತ್ಯ ಇದ್ದರೆ ನಾನು ಒಂದು ತಿಂಗಳ ನಂತರ 226ನೇ ವಿಧಿ ಅಡಿ ಹೈಕೋರ್ಟ್​​​​ ಸಂಪರ್ಕಿಸುತ್ತೇನೆ" ಎಂದು ಅಶ್ವಿನಿ ಉಪಾಧ್ಯಾಯ ಹೇಳಿದ್ದಾರೆ.

ABOUT THE AUTHOR

...view details