ಹೈದರಾಬಾದ್:ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸಲು ರಾಷ್ಟ್ರೀಯ ಸದ್ಭಾವನಾ ದಿನವನ್ನು ಪ್ರತಿ ವರ್ಷ ಆಗಸ್ಟ್ 20 ರಂದು ಆಚರಿಸಲಾಗುತ್ತದೆ. ಎಲ್ಲಾ ಧರ್ಮಗಳ ಭಾರತೀಯರಲ್ಲಿ ರಾಷ್ಟ್ರೀಯ ಏಕೀಕರಣ, ಶಾಂತಿ, ವಾತ್ಸಲ್ಯ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಈ ದಿನವನ್ನು ಆಚರಣೆಗೆ ತರಲಾಗಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಮ್ಮ ಆಡಳಿತ ಅವಧಿಯಲ್ಲಿ ರಾಷ್ಟ್ರೀಯ ಸೌಹಾರ್ದತೆಗೆ ವಿಶೇಷವಾಗಿ ಶ್ರಮಿಸಿದರು. ಅವರ ಈ ಕಾರ್ಯಕ್ಕೆ ಗೌರವ ಸಲ್ಲಿಸುವ ಸಲುವಾಗಿ ಆಗಸ್ಟ್ 20 ಅನ್ನು ರಾಷ್ಟ್ರೀಯ ಸದ್ಭಾವನಾ ದಿನವನ್ನಾಗಿ ಆಚರಿಸಲು ಅಂದಿನ ಕಾಂಗ್ರೆಸ್ ಸರ್ಕಾರವು ನಿರ್ಧರಿಸಿತು. ಸದ್ಭಾವನಾ ದಿನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ.
ರಾಜೀವ್ ಗಾಂಧಿಯವರ ಬಗ್ಗೆ 10 ಕುತೂಹಲಕಾರಿ ಸಂಗತಿಗಳು:
- ರಾಜೀವ್ ಗಾಂಧಿ ಅವರ ಅಜ್ಜ ಕಮಲಾ ನೆಹರೂ ಅವರಿಗೆ ಗೌರವ ಸಲ್ಲಿಸಲು ಅವರನ್ನು ರಾಜೀವ್ ಎಂದು ಹೆಸರಿಸಲಾಯಿತು. 'ಕಮಲಾ' ಎಂಬ ಪದವು ಲಕ್ಷ್ಮಿ ದೇವಿಯನ್ನು ಸೂಚಿಸುತ್ತದೆ ಮತ್ತು 'ರಾಜೀವ್' ಕಮಲದ ಸಮಾನಾರ್ಥಕ ಪದವಾಗಿದೆ. ಕಮಲವನ್ನು ಲಕ್ಷ್ಮಿ ದೇವಿಯನ್ನು ಪೂಜಿಸಲು ಬಳಸಲಾಗುತ್ತದೆ.
- ಅವರು ಫ್ಲೈಯಿಂಗ್ ಕ್ಲಬ್‌ನ ಸದಸ್ಯರಾಗಿದ್ದರು. ಅಲ್ಲಿ ಅವರು ನಾಗರಿಕ ವಿಮಾನಯಾನದಲ್ಲಿ ತರಬೇತಿ ಪಡೆದರು.
- ಅವರು 1970 ರಲ್ಲಿ ಏರ್ ಇಂಡಿಯಾಗೆ ಸೇರಿದರು. 1980 ರಲ್ಲಿ ರಾಜಕೀಯಕ್ಕೆ ಬರುವವರೆಗೂ ಅಲ್ಲಿಯೇ ಕಾರ್ಯ ನಿರ್ವಹಿಸಿದರು.
- ಅವರು ಕಂಪ್ಯೂಟರ್ ಮತ್ತು ಗ್ಯಾಜೆಟ್‌ಗಳತ್ತ ಹೆಚ್ಚಿನ ಒಲವನ್ನು ಹೊಂದಿದ್ದರು. ಸಚಿವರಾಗಿ ಅವರು ದೇಶದೊಳಗೆ ಡಿಜಿಟಲೀಕರಣದ ಪ್ರಗತಿಯನ್ನು ಒತ್ತಿ ಹೇಳಿದರು.
- ಅವರು 1981 ರಲ್ಲಿ ಕಾಂಗ್ರೆಸ್ಸಿನ ಯುವ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದರು.
- ಇಲ್ಲಿಯವರೆಗೆ ಅವರು ದೇಶದ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು 40 ನೇ ವಯಸ್ಸಿನಲ್ಲಿ ದೇಶದ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದರು.
- ಅವರ ನಾಯಕತ್ವದಲ್ಲಿಯೇ ಲೋಕಸಭೆಯಲ್ಲಿ ಕಾಂಗ್ರೆಸ್ ತನ್ನ ಅತಿದೊಡ್ಡ ಬಹುಮತವನ್ನು ಗಳಿಸಿತು. 542 ರಲ್ಲಿ 411 ಸ್ಥಾನಗಳನ್ನು ಗಳಿಸಿದೆ.
- ಭ್ರಷ್ಟಾಚಾರದ ವಿರುದ್ಧದ ಹೋರಾಟದಿಂದಾಗಿ ಅವರಿಗೆ ಮಿಸ್ಟರ್ ಕ್ಲೀನ್ ಎಂದು ಸಂಬೋಧಿಸಲಾಯಿತು.
- ಮೇ 1991 ರಲ್ಲಿ, ಇಂದಿರಾ ಗಾಂಧಿಯವರ ಪ್ರತಿಮೆಗೆ ಹೂಮಾಲೆ ಹಾಕಲು ಅವರು ತಮಿಳುನಾಡಿನ ಶ್ರೀಪೆರುಂಬುದುರ್ಗೆ ತೆರಳಿದ್ದರು. ಈ ಸಮಾರಂಭದಲ್ಲಿ ಶ್ರೀಲಂಕಾದ ಪ್ರತ್ಯೇಕತಾವಾದಿ ಸಂಘಟನೆಯಾದ ಎಲ್‌ಟಿಟಿಇ ಅವರನ್ನು ಹತ್ಯೆಗೈಯಿತು.