ಕರ್ನಾಟಕ

karnataka

ETV Bharat / bharat

"ಸೂರ್ಯ - ಚಂದ್ರ ಯಾರ ಆಳೂ ಅಲ್ಲ ಎಂಬುದು ನೆನಪಿರಲಿ".. ಡಿಸಿಎಂ ಸವದಿ ವಿರುದ್ಧ ಶಿವಸೇನೆ ಆಕ್ರೋಶ

ಪ್ರಸ್ತುತ ಬೆಳಗಾವಿ ವಿಷಯವು ಸುಪ್ರೀಂಕೋರ್ಟ್​ನಲ್ಲಿದೆ. ಸೂರ್ಯ- ಚಂದ್ರ, ಭೂಮಿ ಮೇಲಿದ್ದಾರೋ, ಇಲ್ಲವೋ ಎಂದು ನೋಡಿ ಸುಪ್ರೀಂಕೋರ್ಟ್ ತೀರ್ಪು ನೀಡುವುದಿಲ್ಲ ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಡಿಸಿಎಂ ಲಕ್ಷ್ಮಣ್​ ಸವದಿಗೆ ಟಾಂಗ್​ ಕೊಟ್ಟಿದೆ.

By

Published : Nov 2, 2020, 10:36 AM IST

Updated : Nov 2, 2020, 10:41 AM IST

saamana editorial shivsena criticism on belgaum border dispute issue
ಡಿಸಿಎಂ ಸವದಿ ವಿರುದ್ಧ ಶಿವಸೇನೆ ಆಕ್ರೋಶ

ಮುಂಬೈ:ಸೂರ್ಯ-ಚಂದ್ರ ಇರುವವರೆಗೂ ಬೆಳಗಾವಿ ಜಿಲ್ಲೆಯು ಅಖಂಡ ಕರ್ನಾಟಕದ ಅವಿಭಾಜ್ಯ ಅಂಗ ಎಂದಿದ್ದ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ, ಸೂರ್ಯ-ಚಂದ್ರ ಯಾರ ಅಪ್ಪನ ಆಳಲ್ಲ ಎಂದು ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಹೇಳಿದೆ.

"ಮರಾಠಿ ಸಹೋದರರ ಹೋರಾಟವು ಕಳೆದ 40 ವರ್ಷಗಳಿಂದ ನಡೆಯುತ್ತಿದೆ. ಲಕ್ಷ್ಮಣ ಸವದಿ ಏನೇ ಆಗಿರಲಿ, ಅವರು ಹಾಸಿಗೆಯಲ್ಲಿ ತೆವಳುತ್ತಿದ್ದಾಗಲೇ 2 ಮಿಲಿಯನ್ ಮರಾಠಿ ಸಹೋದರರು ಮಹಾರಾಷ್ಟ್ರಕ್ಕೆ ಬರಲು ಹೆಣಗಾಡುತ್ತಿದ್ದರು. ಪ್ರಸ್ತುತ, ಬೆಳಗಾವಿ ವಿಷಯವು ಸುಪ್ರೀಂಕೋರ್ಟ್​ನಲ್ಲಿದೆ. ಸೂರ್ಯ- ಚಂದ್ರ ಭೂಮಿ ಮೇಲಿದ್ದಾರೋ, ಇಲ್ಲವೋ ಎಂದು ನೋಡಿ ಸುಪ್ರೀಂಕೋರ್ಟ್ ತೀರ್ಪು ನೀಡುವುದಿಲ್ಲ. ಸೂರ್ಯ-ಚಂದ್ರ ಯಾರ ಅಪ್ಪನ ಆಳಲ್ಲ" ಎಂದು ಶಿವಸೇನೆ ಹೇಳಿದೆ.

ಸೂರ್ಯ-ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ; ಮಹಾರಾಷ್ಟ್ರಕ್ಕೆ ಸವದಿ ತಿರುಗೇಟು

"ಬೆಳಗಾವಿ ಹೋರಾಟವು ಸೂರ್ಯನ ಪ್ರಕಾಶಮಾನವಾದ ಬೆಳಕಿನಲ್ಲಿ ನಡೆಯುತ್ತಿದೆ. ಅದೇ ಸೂರ್ಯನ ಬೆಳಕಲ್ಲಿ ಕನ್ನಡ ಪೊಲೀಸರು 'ಜೈ ಮಹಾರಾಷ್ಟ್ರ' ಎನ್ನುವ ಮರಾಠಿ ಸಹೋದರರನ್ನು ಹಿಂಸಿಸುತ್ತಿದ್ದಾರೆ ಮತ್ತು ರಾತ್ರಿಯ ಕತ್ತಲೆಯಲ್ಲಿ ಚಂದ್ರನ ತಂಪಾದ ಬೆಳಕಿನಲ್ಲಿ ಛತ್ರಪತಿ ಶಿವಾಜಿಯ ಪ್ರತಿಮೆಯನ್ನು ತೆಗೆದುಹಾಕುತ್ತಿದ್ದಾರೆ. ಆದರೆ, ಅಲ್ಲಿನ ಮರಾಠಿ ಸಹೋದರರ ಮನೋಸ್ಥೈರ್ಯ ಕಡಿಮೆ ಆಗಿಲ್ಲ" ಎಂದಿದೆ.

"ಕರ್ನಾಟಕ ಸರ್ಕಾರ ನವೆಂಬರ್ 1 ರಂದು ಪ್ರತಿಷ್ಠನ ದಿನವನ್ನು ಆಚರಿಸುತ್ತದೆ. ಗಡಿ ಪ್ರದೇಶದ ಮರಾಠಿ ಜನರು ಈ ದಿನವನ್ನು 'ಕರಾಳ ದಿನ' ಎಂದು ಆಚರಿಸುತ್ತಾರೆ. 20 ಲಕ್ಷ ಮರಾಠಿ ಸಹೋದರರಿಗೆ ಅಂತಹ ದುರ್ಗತಿ ತಂದವರು ಯಾರು?" ಎಂದು ಪ್ರಶ್ನಿಸಿದೆ.

"ಸುಪ್ರೀಂಕೋರ್ಟ್‌ನ ತೀರ್ಪು ಬರುವವರೆಗೂ, ಅಲ್ಲಿನ ಮರಾಠಿ ಸಹೋದರರನ್ನು ಕನಿಷ್ಠ ಮಾನವೀಯತೆಯಿಂದ ನಡೆಸಿಕೊಳ್ಳಬೇಕು, ಮಹಾರಾಷ್ಟ್ರದಲ್ಲೂ ಲಕ್ಷಾಂತರ ಕನ್ನಡ ಸಹೋದರರು ತಮ್ಮ ವ್ಯವಹಾರವನ್ನು ಮಾಡುವ ಮೂಲಕ ಆರಾಮವಾಗಿ ಬದುಕುತ್ತಿದ್ದಾರೆ. ಲಕ್ಷ್ಮಣ್ ಸವದಿಯಂತಹ ಮಂತ್ರಿಗಳು ಇದನ್ನು ಮರೆಯಬಾರದು" ಎಂದು ತಿರುಗೇಟು ನೀಡಿದೆ.

Last Updated : Nov 2, 2020, 10:41 AM IST

ABOUT THE AUTHOR

...view details