ಕರ್ನಾಟಕ

karnataka

ETV Bharat / bharat

27.15 ಲಕ್ಷ ಮನ್ರೆಗಾ ಕಾರ್ಮಿಕರ ಬ್ಯಾಂಕ್​ ಖಾತೆಗಳಿಗೆ 611 ಕೋಟಿ ರೂ. ಠೇವಣಿ: ಯುಪಿ ಸಿಎಂ

21 ದಿನಗಳ ಲಾಕ್​ಡೌನ್​ ಕೂಲಿ ಕಾರ್ಮಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಒಂದು ಹೊತ್ತಿನ ಊಟಕ್ಕೂ ಅವರು ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

By

Published : Mar 30, 2020, 5:53 PM IST

UP CM
UP CM

ಲಖನೌ: ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಲು ಇಡೀ ದೇಶವನ್ನೇ 21 ದಿನಗಳ ಕಾಲ ಲಾಕ್​ಡೌನ್ ಮಾಡಿ ಆದೇಶ ಹೊರಹಾಕಲಾಗಿದ್ದು, ಇದರಿಂದ ಕೂಲಿ ಕಾರ್ಮಿಕರು ನಿತ್ಯದ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಕೂಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಮುಂದಾಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಬರೋಬ್ಬರಿ 611 ಕೋಟಿ ರೂಪಾಯಿ ವಿವಿಧ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟಿದ್ದಾರೆ. ಇದು 27.15 ಲಕ್ಷ ಮನೆಗ್ರಾ ಜನರಿಗೆ ಸಹಕಾರಿಯಾಗಲಿದೆ. ಇದರ ಜತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನ್ರೆಗಾ) ಮೂಲಕ ಅವರಿಗೆ ಕಾಳು ನೀಡಲು ಸಹ ಮುಂದಾಗಿದೆ.

ಜನ್​ ಧನ್​ ಯೋಜನೆ ಖಾತೆ ಹೊಂದಿರುವ ಮಹಿಳಾ ಕೂಲಿ ಕಾರ್ಮಿಕರು ಹೆಚ್ಚುವರಿಯಾಗಿ 500 ರೂ. ನಗದು ಹಣ ಪಡೆದುಕೊಳ್ಳಲಿದ್ದು, ಅದು ನೇರವಾಗಿ ಖಾತೆಗೆ ಜಮಾವಣೆಗೊಳ್ಳಲಿದೆ ಎಂದಿದ್ದಾರೆ. ಇದರ ಹೊರತಾಗಿ ಹೆಚ್ಚುವರಿಯಾಗಿ 1000 ರೂ ಖಾತೆಗೆ ಪ್ರತಿ ತಿಂಗಳು ಜಮಾವಣೆಗೊಳ್ಳಲಿದೆ ಎಂದು ಸಿಎಂ ಕಚೇರಿ ತಿಳಿಸಿದೆ.

ಮಹಾಮಾರಿ ಕೊರೊನಾದಿಂದ ಇಡೀ ದೇಶವನ್ನೇ ರಕ್ಷಣೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೂಲಿ ಕಾರ್ಮಿಕರ ರಕ್ಷಣೆಗೆ ಸರ್ಕಾರ ಯಾವಾಗಲೂ ಬದ್ಧ ಎಂದು ಹೇಳಿದ್ದಾರೆ.

ABOUT THE AUTHOR

...view details