ಕೋಲ್ಕತಾ (ಪಶ್ಚಿಮ ಬಂಗಾಳ):ಫೇಸ್ ಮಾಸ್ಕ್ ಧರಿಸಿದ ದುಷ್ಕರ್ಮಿಗಳು ಎಟಿಎಂ ಮುರಿಯಲು ಯತ್ನಿಸಿದ ಘಟನೆ ನಗರ ಪೊಲೀಸರಿಗೆ ಹೊಸ ಸವಾಲೊಡ್ಡಿದೆ.
ಮಾಸ್ಕ್ ಧರಿಸಿ ಎಟಿಎಂ ಮುರಿಯಲು ಯತ್ನ: ದುಷ್ಕರ್ಮಿಗಳನ್ನ ಪತ್ತೆಹಚ್ಚುವುದೇ ಪೊಲೀಸರಿಗೆ ಸವಾಲು! - ಪೊಲೀಸರಿಗೆ ಸವಾಲು
ಫೇಸ್ ಮಾಸ್ಕ್ ಧರಿಸಿದ ದುಷ್ಕರ್ಮಿಗಳು ಎಟಿಎಂ ಮುರಿಯಲು ಯತ್ನಿಸಿರುವುದರಿಂದ ಅಪರಾಧಿಗಳನ್ನು ಗುರುತಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
robber
ಕೋವಿಡ್-19 ಹಿನ್ನೆಲೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವುದರಿಂದ, ಅಪರಾಧಿಗಳನ್ನು ಗುರುತಿಸುವುದೇ ಪೊಲೀಸರಿಗೆ ಸವಾಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂತಹ ಘಟನೆಗಳನ್ನು ತಡೆಗಟ್ಟಲು ವಾಚ್ಮ್ಯಾನ್ ನೇಮಿಸುವುದು ಮಾತ್ರವಲ್ಲದೇ, ಎಟಿಎಂ ಮುರಿಯಲು ಯಾರಾದರೂ ಪ್ರಯತ್ನಪಟ್ಟರೆ, ಹತ್ತಿರದ ಪೊಲೀಸ್ ಠಾಣೆಗೆ ವೇಗವಾಗಿ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದರು.