ನವದೆಹಲಿ :ಕೋವಿಡ್ನಿಂದಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದ್ದ ರಾಷ್ಟ್ರಪತಿ ಭವನವು ಫೆಬ್ರುವರಿ 6ರಿಂದ ಮುಕ್ತವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶನಿವಾರ ಮತ್ತು ಭಾನುವಾರದಂದು ತೆರೆಯಲಿದ್ದು, ಸರ್ಕಾರಿ ರಜಾದಿನಗಳಲ್ಲಿ ಮುಚ್ಚಿರಲಿದೆ ಎಂದು ಮಾಹಿತಿ ನೀಡಲಾಗಿದೆ.
ಫೆ.6ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ ರಾಷ್ಟ್ರಪತಿ ಭವನ - ರಾಷ್ಟ್ರಪತಿ ಭವನ
ಭವನದ ಆವರಣದಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳಾದ ದೈಹಿಕ ಅಂತರ, ಮಾಸ್ಕ್ ಧರಿಸುವುದು ಸೇರಿ ದಿನವೊಂದಕ್ಕೆ ಕೆಲವೇ ಮಂದಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ..
ರಾಷ್ಟ್ರಪತಿ ಭವನ
ಭವನಕ್ಕೆ ಆಗಮಿಸುವವರು ತಲಾ 50 ರೂಪಾಯಿ ಪಾವತಿಸಿ ಆನ್ಲೈನ್ನಲ್ಲಿ ಬುಕ್ ಮಾಡಿಕೊಳ್ಳಬೇಕು. ಅಲ್ಲದೆ ಭವನದ ಆವರಣದಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳಾದ ದೈಹಿಕ ಅಂತರ, ಮಾಸ್ಕ್ ಧರಿಸುವುದು ಸೇರಿ ದಿನವೊಂದಕ್ಕೆ ಕೆಲವೇ ಮಂದಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕಳೆದ ವರ್ಷ ಮಾರ್ಚ್ 13ರಂದು ಕೋವಿಡ್ ಹಿನ್ನೆಲೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.
ಓದಿರಿ:ರೈತರ ಸಾಲ ಮನ್ನಾ ಮಾಡಿ, ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿ: ರಾಕೇಶ್ ಟಿಕಾಯತ್