ಕರ್ನಾಟಕ

karnataka

ETV Bharat / bharat

ಜನಾಂಗೀಯ ತಾರತಮ್ಯ ಮಾಡಿದ ಆರೋಪಿಗಳು ಅಂದರ್​: ಮಣಿಪುರದ ವಿದ್ಯಾರ್ಥಿಗಳಿಗೆ ಪೊಲೀಸರ ನೆರವು

ಮಣಿಪುರ ಮೂಲದ ವಿದ್ಯಾರ್ಥಿಗಳನ್ನು ಸೂಪರ್​ ಮಾರುಕಟ್ಟೆಯೊಂದರ ಒಳಗೆ ಬಿಡದ ಆರೋಪದಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಹೈದರಾಬಾದ್​ನ ವನಸ್ಥಲಿಪುರಂನಲ್ಲಿ ನಡೆದಿದೆ.

By

Published : Apr 10, 2020, 9:09 PM IST

Manipur students
ಮಣಿಪುರದ ವಿದ್ಯಾರ್ಥಿಗಳು

ಹೈದರಾಬಾದ್​: ಮಣಿಪುರದ ಇಬ್ಬರು ವಿದ್ಯಾರ್ಥಿಗಳಿಗೆ ಸೂಪರ್​ ಮಾರ್ಕೆಟ್​ನೊಳಗೆ ಬಿಡದೇ ಜನಾಂಗೀಯ ತಾರತಮ್ಯ ಮಾಡಿದ ಮೂವರು ಆರೋಪಿಗಳನ್ನು ರಾಚಕೊಂಡ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಇದರ ಜೊತೆಗೆ ಇಬ್ಬರಿಗೆ ಸಹಾಯಬೇಕೆನಿಸಿದಾಗ ಠಾಣೆಗೆ ಬನ್ನಿ ಎಂದು ಮಣಿಪುರದ ವಿದ್ಯಾರ್ಥಿಗಳಿಗೆ ಅಭಯ ನೀಡಿದ ಪೊಲೀಸರು, ಜಾತಿ, ಧರ್ಮ, ಜನಾಂಗ ಹಾಗೂ ಭಾಷೆಯ ವಿಚಾರದಲ್ಲಿ ತಾರತಮ್ಯ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಣಿಪುರದ ವಿದ್ಯಾರ್ಥಿಗಳಿಬ್ಬರೂ ಬಿ.ಟೆಕ್​ ಓದುತ್ತಿದ್ದು, ದವಸ ಧಾನ್ಯ ಹಾಗೂ ತರಕಾರಿಗಳನ್ನು ತೆಗೆದುಕೊಳ್ಳಲು ಬುಧವಾರ ವನಸ್ಥಲಿಪುರಂ ಬಳಿಯಿರುವ ಸೂಪರ್​ ಮಾರ್ಕೆಟ್​ ಒಂದಕ್ಕೆ ಧಾವಿಸಿದ್ದರು. ಈ ವೇಳೆ, ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಬಿಟ್ಟಿರಲಿಲ್ಲ. ಇದಕ್ಕಾಗಿ ನೊಂದ ವಿದ್ಯಾರ್ಥಿಗಳು ವಿಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹರಿಯಬಿಟ್ಟಿದ್ದು, ವಿಡಿಯೋ ಆಧರಿಸಿ ರಾಚಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಈ ಕುರಿತು ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ಕಿರಣ್​ ರಿಜಿಜು ಟ್ವೀಟ್ ಮಾಡಿದ್ದು, ಟ್ವೀಟ್​ನಲ್ಲಿ ಘಟನೆಯ ಸ್ಥಳದ ಬಗ್ಗೆ ಮಾಹಿತಿ ಕೇಳಿದ್ದರು. ಈ ಬಗ್ಗೆ ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾಮ್​ ಕೂಡಾ ಪ್ರತಿಕ್ರಿಯೆ ನೀಡಿ, ಜನಾಂಗೀಯ ತಾರತಮ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.

ABOUT THE AUTHOR

...view details