ಕೋಲ್ಕತ್ತಾ: ಪಶ್ಚಿಮ ಬಂಗಾಳದ ಖಾಸಗಿ ಬಸ್ ನಿರ್ವಾಹಕರ ಸಂಘಟನೆ ಇನ್ನುಮುಂದೆ ತಮ್ಮ ಬಸ್ಗಳಲ್ಲಿ ಎರಡು ಸೀಟುಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿರಿಸಲು ಮುಂದಾಗಿರುವ ವಿಚಾರ ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಬಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ತಪನ್ ಬ್ಯಾನರ್ಜಿ, ಎಲ್ಲ ಬಸ್ಗಳಲ್ಲಿ ಮೀಸಲಿಡಲು ನಿರ್ಧರಿಸಿರುವ 2 ಸೀಟ್ಗಳನ್ನು ‘ತ್ರಿಧಾರ’ ಎಂದು ಕರೆಯಲು ಉದ್ದೇಶಿಸಲಾಗಿದೆ.
ಅಲ್ಲದೇ ರಾಜ್ಯದ 35 ಸಾವಿರದಿಂದ 40 ಸಾವಿರ ಬಸ್ಗಳಲ್ಲಿ ಈ ಸೌಲಭ್ಯ ಒದಗಿಸಲು ಚಿಂತನೆ ನಡೆಸಲಾಗಿದೆ. ಜನರಲ್ಲಿ ತೃತೀಯ ಲಿಂಗಿಗಳ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ಈ ನಿಯಮ ಜಾರಿ ಮಾಡಲಾಗುವುದು ಎಂದು ನಿರ್ವಾಹಕರ ಒಕ್ಕೂಟ ತಿಳಿಸಿದೆ.
ಈಗಾಗಲೇ ಎಲ್ಲ ಬಸ್ಗಳಲ್ಲಿ ಈ ಸೌಲಭ್ಯ ಒದಗಿಸುವ ಕಾರ್ಯ ಭರದಿಂದ ಸಾಗಿದೆ. ಈ ಮೂಲಕ ತೃತೀಯ ಲಿಂಗಿಗಳ ಕುರಿತಂತೆ ಜನರಲ್ಲಿ ಹಾಗೂ ಸಿಬ್ಬಂದಿಯಲ್ಲಿ ಗೌರವ ಮೂಡುವುದಲ್ಲದೇ ಇವರನ್ನ ಎಲ್ಲರಂತೆ ಸಮಾನವಾಗಿ ಕಾಣುವಂತಾಗುತ್ತದೆ ಎಂದಿದ್ದಾರೆ. ಅಲ್ಲದೇ ರಾಜ್ಯದ ಎಲ್ಲ ಬಸ್ ಮಾಲೀಕರು ಈ ವ್ಯವಸ್ಥೆ ಜಾರಿ ಮಾಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.