ಕನೌಜ್(ಉತ್ತರಪ್ರದೇಶ): ಬಿಹಾರದಿಂದ ದೆಹಲಿಗೆ 148 ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿರುವ ಪರಿಣಾಮ 40 ಜನರಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ.
ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿ... 40 ಜನರಿಗೆ ಗಾಯ, 15 ಮಂದಿ ಸ್ಥಿತಿ ಗಂಭೀರ
ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ವೊಂದು ಪಲ್ಟಿಯಾಗಿರುವ ಪರಿಣಾಮ ಅನೇಕರಿಗೆ ಗಾಯಗಳಾಗಿರುವ ಘಟನೆ ಕನೌಜ್ನಲ್ಲಿ ನಡೆದಿದೆ.
Lucknow-Agra Expressway
ಬಸ್ ಲಕ್ನೋ- ಆಗ್ರಾ ಎಕ್ಸ್ಪ್ರೆಸ್ ವೇನಲ್ಲಿ ಚಲಿಸುತ್ತಿದ್ದ ವೇಳೆ ಏಕಾಏಕಿಯಾಗಿ ಟೈರ್ ಸ್ಫೋಟಗೊಂಡಿರುವ ಪರಿಣಾಮ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಹೀಗಾಗಿ ಬಸ್ನಲ್ಲಿದ್ದ 40 ಕಾರ್ಮಿಕರು ಗಾಯಗೊಂಡಿದ್ದಾರೆ.
ತಕ್ಷಣವೇ ಉತ್ತರಪ್ರದೇಶ ಪೊಲೀಸರು ಗಾಯಗೊಂಡಿರುವವರನ್ನ ವೈದ್ಯಕೀಯ ಕಾಲೇಜ್ಗೆ ದಾಖಲು ಮಾಡಲಾಗಿದ್ದು, 15 ಮಂದಿಯ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.