ನವದೆಹಲಿ:ಪ್ರಧಾನಿ ಮೋದಿ ಸಂಜೆ 5 ಗಂಟೆಗೆ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿ ಜನತೆಯೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಸಂವಾದದ ಕುರಿತು ಮಾತನಾಡಿರುವ ಪ್ರಧಾನಿ ಮೋದಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರದ ಜನರೊಂದಿಗೆ ನಾನು ಮಾತನಾಡಬೇಕಿದೆ. ಈ ಸಮಯದಲ್ಲಿ ನನ್ನ ಜೊತೆ ಯಾವುದಾದರೂ ಸಂದೇಹಗಳಿದ್ದರೆ ಪರಿಹರಿಸಿಕೊಳ್ಳಬಹುದಾಗಿದೆ. ನಮೋ ಅಪ್ಲಿಕೇಷನ್ ಮೂಲಕ ಪ್ರಶ್ನೆಗಳನ್ನು ಕೇಳಬಹುದು ಎಂದಿರುವ ಅವರು ಕೊರೊನಾ ಹರಡದಂತೆ ತಡೆಯಲು ಸಲಹೆ, ಸೂಚನೆಗಳನ್ನು ನೀಡಲು ಮನವಿ ಮಾಡಿದ್ದಾರೆ.
ಸ್ವ ಕ್ಷೇತ್ರದ ಜನರೊಂದಿಗೆ ಸಂಜೆ 5 ಗಂಟೆಗೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್: ಕೊರೊನಾ ಕುರಿತ ಸಲಹೆ ನೀಡಲು ಮನವಿ - covid 19
ಪ್ರಧಾನಮಂತ್ರಿ ನರೇಂದ್ರ ಮೋದಿ
09:04 March 25
ವಾರಣಾಸಿ ಜನತೆಯೊಂದಿಗೆ ಪ್ರಧಾನಿ ವಿಡಿಯೋ ಸಂವಾದ
Last Updated : Mar 25, 2020, 1:24 PM IST