ಕರ್ನಾಟಕ

karnataka

By

Published : Mar 8, 2020, 8:10 PM IST

Updated : Mar 8, 2020, 8:22 PM IST

ETV Bharat / bharat

ನಾರಿ ಶಕ್ತಿ ಪುರಸ್ಕೃತರೊಂದಿಗೆ ಮೋದಿ ಸಂವಾದ.. ನಿಸ್ವಾರ್ಥ ಸೇವೆಗೆ ಪ್ರಧಾನಿ ಶ್ಲಾಘನೆ!

ಇತರಿಗೆ ಒಳ್ಳೆಯದನ್ನು ಮಾಡಬೇಕೆಂಬ ಉದ್ದೇಶದಿಂದ ಉತ್ತಮ ಕಾರ್ಯ ನಡೆಸಿದ್ದೀರ. ನಿಮ್ಮ ಕಾರ್ಯಕ್ಕೆ ಯಾವುದೇ ಪ್ರತಿಫಲ ನಿರೀಕ್ಷೀಸದ ನೀವು ಇಂದು ಇತರರಿಗೆ ಸ್ಫೂರ್ತಿಯಾಗಿದ್ದೀರಿ ಎಂದು ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತರನ್ನು ಮೋದಿ ಅಭಿನಂದಿಸಿದ್ದಾರೆ.

Prime Minister Modi lauds 'Nari Shakti Puraskar' awardeesನಾರಿ ಶಕ್ತಿ ಪುರಸ್ಕೃತರೊಂದಿಗೆ ಮೋದಿ ಸಂವಾದ
ನಾರಿ ಶಕ್ತಿ ಪುರಸ್ಕೃತರೊಂದಿಗೆ ಮೋದಿ ಸಂವಾದ

ನವದೆಹಲಿ:ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ನೀವೆಲ್ಲ ಇತರರಿಗೆ ಮಾದರಿಯಾಗಿದ್ದೀರಿ ಎಂದು ಅಭಿನಂದಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ನೀವು ನಿಮ್ಮ ಕೆಲಸವನ್ನು ಪ್ರಾರಂಭಿಸಿದಾಗ ಒಂದು ಮಿಷನ್ ಅಥವಾ ಜೀವನದಲ್ಲಿ ಇತರಿಗೆ ಒಳ್ಳೆಯದು ಮಾಡಬೇಕೆಂಬ ಉದ್ದೇಶದಿಂದ ಉತ್ತಮ ಕಾರ್ಯ ನಡೆಸಿದ್ದೀರಿ. ನಿಮ್ಮ ಕಾರ್ಯಕ್ಕೆ ಯಾವುದೇ ಪ್ರತಿಫಲ ನಿರೀಕ್ಷೀಸದ ನೀವು ಇಂದು ಇತರರಿಗೆ ಸ್ಫೂರ್ತಿಯಾಗಿದ್ದೀರಿ' ಎಂದು ಹೇಳಿದ್ದಾರೆ.

ನಾರಿ ಶಕ್ತಿ ಪುರಸ್ಕೃತರೊಂದಿಗೆ ಮೋದಿ ಸಂವಾದ..

ನಿಮ್ಮ ಕೆಲಸವನ್ನು ನೋಡುವ ಇತರರು ಕೂಡ ನಿಮ್ಮಿಂದ ಸ್ಫೂರ್ತಿಗೊಂಡು ಉತ್ತಮ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ. ಅಲ್ಲದೆ ತಮ್ಮ ಕಾರ್ಯದ ವೇಳೆ ಎದುರಾದ ಸಮಸ್ಯೆಗಳ ಬಗ್ಗೆ ಹೇಳಿ ಎಂದು ಪುರಸ್ಕೃತರು ಎದುರಿಸಿದ ಸವಾಲುಗಳನ್ನ ಮೋದಿ ಆಲಿಸಿದ್ರು.

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ (ಆರ್‌ಬಿಸಿಸಿ) ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವಾದ ಇಂದು ಸಾಧಕಿಯರಿಗೆ 'ನಾರಿ ಶಕ್ತಿ ಪುರಸ್ಕರ' ಪ್ರದಾನ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸ್ಥಾಪಿಸಿದ ನಾರಿ ಶಕ್ತಿ ಪುರಾಸ್ಕರ, ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡುವವರಿಗೆ ಗೌರವ ಮತ್ತು ಮನ್ನಣೆ ನೀಡುವ ಸಂಕೇತವಾಗಿ ಪ್ರತಿವರ್ಷ ಮಾರ್ಚ್ 8 ರಂದು ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿ ಆಗಿದೆ.

Last Updated : Mar 8, 2020, 8:22 PM IST

ABOUT THE AUTHOR

...view details