ಹೈದರಾಬಾದ್:ಆಗಸ್ಟ್ 5ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತಕರಾರು ತೆಗೆದಿದ್ದಾರೆ.
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ಉಪಸ್ಥಿತಿ ಸಂವಿಧಾನದ ನಿಯಮ ಉಲ್ಲಂಘನೆಯಾಗುತ್ತದೆ. 400 ವರ್ಷಗಳಿಂದಲೂ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇತ್ತು. ಆದರೆ 1992ರಲ್ಲಿ ಇದನ್ನು ಧ್ವಂಸ ಮಾಡಲಾಗಿದೆ ಅವರು ಟ್ವೀಟ್ ಮಾಡಿದ್ದಾರೆ.