ಕರ್ನಾಟಕ

karnataka

ETV Bharat / bharat

ಹಾಲಿನ ಕೆನೆಯ ಮೇಲೆ ಅರಳಿದ ಸ್ವಾತಂತ್ರ್ಯ ಹೋರಾಟಗಾರರು: ನೂತನ ದಾಖಲೆ ಬರೆದ ಕಲಾವಿದೆ

ಪಶ್ಚಿಮ ಬಂಗಾಳದ ಕಲಾವಿದೆವೋರ್ವಳು ಹಾಲಿನ ಕೆನೆಯ ಮೇಲೆ ಸ್ವಾತಂತ್ರ್ಯ ಹೋರಾಟಗಾರರನ್ನು ಚಿತ್ರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಲಾಕ್​​​ಡೌನ್ ವೇಳೆ ಹಾಲಿನ ಕೆನೆಯ ಮೇಲೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸುವ ಕುರಿತು ಯೋಚನೆ ಬಂದಿದೆ. ಬಳಿಕ ನಿರಂತರ ಪ್ರಯತ್ನ ಮಾಡಿ, ಇದೀಗ 8 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಲಿನ ಕೆನೆಯ ಮೇಲೆ ಚಿತ್ರಿಸಿ ಇಂಡಿಯಾ ಬುಕ್ ಆಫ್​ ರೆಕಾರ್ಡ್​​ಗೆ ಸೇರ್ಪಡೆಗೊಂಡಿದ್ದಾರೆ.

By

Published : Nov 23, 2020, 7:27 AM IST

painting eight freedom fighters' faces on milk cream layers in different bowls.
ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಸೇರಿದ ಕಲಾವಿದೆ

ಬಲೂರ್ಘಾಟ್​ (ಪಶ್ಚಿಮ ಬಂಗಾಳ): ಹಾಲಿನ ಮೇಲೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬರೆದು ಯುವತಿವೋರ್ವಳು ಇಂಡಿಯಾ ಬುಕ್ ಆಫ್ ರೆಕಾರ್ಡ್​​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

18 ವರ್ಷದ ಜಾನ್ವಿ ಬಸಕ್ ಈ ಸಾಧನೆ ಮಾಡಿರುವ ಯುವ ಕಲಾವಿದೆಯಾಗಿದ್ದಾರೆ. ಇವರು ಲಾಕ್​ಡೌನ್ ವೇಳೆ ಈ ರೀತಿಯಾಗಿ ಚಿತ್ರ ಬಿಡಿಸುವುದನ್ನು ಕಲಿತಿದ್ದರು. ಇದೀಗ ಹಾಲಿನ ಕೆನೆಯ ಮೇಲೆ 8 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಮೂಡಿಸುವ ಮೂಲಕ ವಿನೂತನ ಸಾಧನೆ ಮಾಡಿದ್ದಾರೆ.

ಹಾಲಿನ ಕೆನೆಯ ಮೇಲೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಣ

ವಿವಿಧ ಬಟ್ಟಲುಗಳಲ್ಲಿ ಹಾಕಿರುವ ಹಾಲಿನ ಕೆನೆಯ ಮೇಲೆ ಬರೆದಿರುವ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಣವು ವೈರಲ್ ಆಗುತ್ತಿದೆ.

ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಜಾನ್ವಿ, ನಾನು ಬಾಲ್ಯದಿಂದಲೂ ಚಿತ್ರ ಬಿಡಿಸುವ ಅಭ್ಯಾಸ ಬೆಳೆಸಿಕೊಂಡಿದ್ದೆ. ನನ್ನ ಪೋಷಕರು ಸಹ ಚಿತ್ರ ಇದಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಆದರೆ ಪೈಂಟಿಂಗ್​​ನಲ್ಲಿ ನೂತನ ರೀತಿಯನ್ನು ಕಳಿಯಬೇಕೆಂದಿದ್ದೆ. ಹೀಗಾಗಿ ಹೊಸ ಪ್ರಯತ್ನ ಮಾಡಿದೆ ಎಂದಿದ್ದಾರೆ.

ಲಾಕ್​​ಡೌನ್​​ನಲ್ಲಿ ಒಂದು ದಿನ ಎಂದಿನಂತೆ ತಾಯಿ ಕುಡಿಯಲು ನನಗೆ ಹಾಲು ನೀಡಿದರು. ಆದರೆ ಆ ಹಾಲು ಕುಡಿಯಲು ನನಗೆ ಮರೆತು ಹೋಗಿತ್ತು. ಆಗ ನನಗೆ ಕೆನೆಗಟ್ಟಿದ್ದ ಹಾಲಿನ ಮೇಲೆ ಚಿತ್ರ ಬಿಡಿಸುವ ಆಲೋಚನೆ ಬಂದಿತು. ಹಲವು ಪ್ರಯತ್ನದ ಬಳಿಕ ಉತ್ತಮ ಚಿತ್ರ ಬಿಡಿಸಲು ಆರಂಭಿಸಿದೆ. ಬಳಿಕ ಬೌಲ್​​ನಲ್ಲಿ ಹಾಲು ತೆಗೆದುಕೊಂಡು ಅದರಲ್ಲಿ 8 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸಲು ಮುಂದಾದೆ ಎಂದು ಜಾನ್ವಿ ತಿಳಿಸಿದ್ದಾರೆ.

ABOUT THE AUTHOR

...view details