ನವದೆಹಲಿ: ಪ್ರತಿಪಕ್ಷಗಳ ಭಾರಿ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಇದೇ ಮಸೂದೆಯ ಚರ್ಚೆ ನಾಟಕೀಯ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಯಿತು.
ಗೃಹ ಸಚಿವ ಅಮಿತ್ ಶಾ ಕಲಾಪ ಅರಂಭದ ವೇಳೆ ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಮಾಡಿದರು. ಈ ಮಸೂದೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಮಸೂದೆ ದೇಶದ ಭದ್ರತೆಗೆ ಧಕ್ಕೆ ತರುತ್ತದೆ ಎಂದು ಹೇಳಿದ ಓವೈಸಿ, ಮಸೂದೆಯ ಪ್ರತಿಯೊಂದನ್ನು ಕಲಾಪದ ವೇಳೆ ಹರಿದು ರಂಪಾಟ ನಡೆಸಿದ್ದಾರೆ. ತಮ್ಮ ನಡೆಯನ್ನು ನಂತರದಲ್ಲಿ ಓವೈಸಿ ಸಮರ್ಥಿಸಿಕೊಂಡಿದ್ದಾರೆ.