ಕರ್ನಾಟಕ

karnataka

ETV Bharat / bharat

ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ಯಾ ಪೂಜೆ ನೆರವೇರಿಸಿದ ಸಿಎಂ ಚೌಹಾಣ್

ಪ್ರತಿಯೊಂದು ಸರ್ಕಾರಿ ಕೆಲಸವನ್ನು ಪ್ರಾರಂಭಿಸುವ ಮೊದಲು ಕನ್ಯಾ ಪೂಜೆ ಮಾಡಬೇಕೆಂಬ ಆದೇಶವನ್ನು ಮಧ್ಯಪ್ರದೇಶ ಸರ್ಕಾರ ಹೊರಡಿಸಿದ್ದು, ಇಂದು ಹೋಶಂಗಾಬಾದ್‌ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸತ್ವಃ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕನ್ಯಾ ಪೂಜೆ ಮಾಡುವ ಮೂಲಕ ಈ ಕಾರ್ಯ ಪ್ರಾರಂಭಿಸಿದ್ದಾರೆ.

By

Published : Dec 25, 2020, 5:37 PM IST

chouhan
chouhan

ಭೋಪಾಲ್ (ಮಧ್ಯಪ್ರದೇಶ):ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ಯಾ ಪೂಜೆ ಮಾಡುವ ಮೂಲಕ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಈ ಕ್ರಮವನ್ನು ಘೋಷಿಸಿದ್ದ ಮುಖ್ಯಮಂತ್ರಿ, ಇಂದು ಹೋಶಂಗಾಬಾದ್‌ನಲ್ಲಿ ಈ ಕಾರ್ಯ ಮಾಡಿದ್ದಾರೆ.

ಪ್ರತಿಯೊಂದು ಸರ್ಕಾರಿ ಕೆಲಸವನ್ನು ಪ್ರಾರಂಭಿಸುವ ಮೊದಲು ಕನ್ಯಾ ಪೂಜೆ ಮಾಡುವ ಮೊದಲ ರಾಜ್ಯವಾಗಿ ಮಧ್ಯಪ್ರದೇಶ ಹೊರಹೊಮ್ಮಿದೆ. ರಾಜ್ಯದಲ್ಲಿ ಸರ್ಕಾರಿ ಕೆಲಸ ಮಾಡುವ ಮೊದಲು ಹೆಣ್ಣು ಮಗುವಿನ ಆರಾಧನೆ ಪ್ರಾರಂಭವಾಗಿದ್ದು, ಇನ್ನು ಮುಂದಿನ ದಿನಗಳಲ್ಲೂ ಇದು ಮುಂದುವರಿಯಲಿದೆ.

ಕನ್ಯಾ ಪೂಜೆ ನೆರವೇರಿಸಿದ ಶಿವರಾಜ್ ಸಿಂಗ್ ಚೌಹಾಣ್

ಇಂದು ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿ ಲಭ್ಯವಿರುವ ಮುಂದಿನ ಕಂತಿನ ಆರ್ಥಿಕ ಸೌಲಭ್ಯಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಹೋಶಂಗಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಸಿಎಂ ವೇದಿಕೆಯಲ್ಲಿ ಕನ್ಯಾ ಪೂಜೆ ನಡೆಸಿದರು. ಶಿವರಾಜ್ ಸಿಂಗ್ ಚೌಹಾಣ್ ಹೆಣ್ಣು ಮಕ್ಕಳ ಪಾದಗಳನ್ನು ಮುಟ್ಟಿ ಪೂಜೆ ಆರಂಭಿಸಿದರು. ಇದರ ನಂತರ ರೈತರ ಹಣ ವರ್ಗಾಯಿಸುವ ಕಾರ್ಯಕ್ರಮ ಪ್ರಾರಂಭವಾಯಿತು.

ಕನ್ಯಾ ಪೂಜೆ ನೆರವೇರಿಸಿದ ವರಾಜ್ ಸಿಂಗ್ ಚೌಹಾಣ್

ಸೆಪ್ಟೆಂಬರ್ ತಿಂಗಳಿನಲ್ಲೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕನ್ಯಾ ಪೂಜೆಯ ಆದೇಶ ಹೊರಡಿಸಿದ್ದರು. ಘೋಷಣೆಯಾದ ನಾಲ್ಕು ತಿಂಗಳ ನಂತರ ರಾಜ್ಯ ಸರ್ಕಾರ ಇದನ್ನು ಕಡ್ಡಾಯಗೊಳಿಸಿದೆ.

ಕನ್ಯಾ ಪೂಜೆ ನೆರವೇರಿಸಿದ ವರಾಜ್ ಸಿಂಗ್ ಚೌಹಾಣ್

ಸಿಎಂ ಶಿವರಾಜ್ ಈಗ ಹೊಸ ಸುಗ್ರೀವಾಜ್ಞೆ ಹೊರಡಿಸಿದ್ದು, ಸರ್ಕಾರಿ ಕೆಲಸಗಳಿಗೆ ಮುಂಚಿತವಾಗಿ ಕನ್ಯಾ ಪೂಜೆ ನಡೆಸಲು ಆದೇಶಿಸಿದ್ದಾರೆ. ಇದಕ್ಕಾಗಿ ಎಲ್ಲಾ ಇಲಾಖೆಗಳಿಗೆ ಲಿಖಿತವಾಗಿ ಆದೇಶಗಳನ್ನು ಕಳುಹಿಸಲಾಗಿದೆ.

ABOUT THE AUTHOR

...view details