ಕರ್ನಾಟಕ

karnataka

ETV Bharat / bharat

'ಕಪ್ಪುಪಟ್ಟಿ'ಗೆ ಪಾಕ್​ ಸೇರ್ಪಡೆ ತಡೆಯಲು ಹವಣಿಸಲಿವೆ ಈ 3 ರಾಷ್ಟ್ರಗಳು..!

ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ಸಭರ್​ವಾಲ್ , ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎರಡನೇ ಬಾರಿಗೆ ಭಾಗವಹಿಸಿ, ತಮ್ಮ ಭಾಷಣದಲ್ಲಿ ಅಂತಾರಾಷ್ಟ್ರೀಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ‘ಭಯೋತ್ಪಾದನೆಯೊಂದಿಗೆ ಮಾತುಕತೆ ಸಾಗುವುದಿಲ್ಲ’ ಎಂಬ ನಿಲುವು ತಳೆದಿರುವುದು ಸ್ವಾಗತಾರ್ಹ. ಕಾಶ್ಮೀರದ ಬಗ್ಗೆ ಟ್ರಂಪ್ ಮಧ್ಯಸ್ಥಿಕೆ ವಹಿಸುವುದರ ಬಗ್ಗೆ ಚಿಂತೆಯಿಲ್ಲ. ಆದರೆ, ಪಾಕಿಸ್ತಾನದಿಂದ ಹೊರಬರುತ್ತಿರುವ ಭಯೋತ್ಪಾದನೆ ವಿರುದ್ಧ ಅವರ ರಕ್ಷಣಾ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಕ್ಟೋಬರ್​ನಲ್ಲಿ ನಡೆಯಲಿರುವ ಎಫ್‌ಎಟಿಎಫ್ (ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ) ಸಭೆ ಪಾಕ್​ಗೆ ನಿರ್ಣಾಯಕವಾಗಲಿದೆ ಎಂದರು.

ಸಾಂದರ್ಭಿಕ ಚಿತ್ರ

By

Published : Sep 28, 2019, 7:25 AM IST

ನವದೆಹಲಿ: ಪಾಕಿಸ್ತಾನದ ಜೊತೆಗಿನ ರಾಜತಾಂತ್ರಿಕ ಮಾತುಕತೆ ಭಾರತಕ್ಕೆ ಉಚಿತವಲ್ಲ ಎಂದು ಇಸ್ಲಾಮಾಬಾದ್‌ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಭಾರತೀಯ ಹೈಕಮಿಷನರ್ ಶರತ್ ಸಭರ್​ವಾಲ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎರಡನೇ ಬಾರಿಗೆ ಭಾಗವಹಿಸಿ, ತಮ್ಮ ಭಾಷಣದಲ್ಲಿ ಅಂತಾರಾಷ್ಟ್ರೀಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ರಾಜತಾಂತ್ರಿಕ ಮತ್ತು ಕೆಲವು ರಾಷ್ಟ್ರಗಳೊಂದಿಗಿನ ಸಂಬಂಧಗಳು ಅತ್ಯಂತ ಕಷ್ಟಕರವಾದ ಈ ಸಂದರ್ಭದಲ್ಲಿ ಸಮರ್ಥವಾಗಿ ಮಾತನಾಡಿದ್ದಾರೆ. ‘ಭಯೋತ್ಪಾದನೆಯ ಜೊತೆಜೊತೆಗೆ ಮಾತುಕತೆ ಸಾಧ್ಯವಿಲ್ಲ’ ಎಂಬ ದಿಟ್ಟ ನಿಲುವು ತಳೆದಿರುವುದು ಸ್ವಾಗತಾರ್ಹ ಎಂದರು.

ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಭರ್​ವಾಲ್, ಕಾಶ್ಮೀರದ ಬಗ್ಗೆ ಟ್ರಂಪ್ ಮಧ್ಯಸ್ಥಿಕೆ ವಹಿಸುವುದರ ಬಗ್ಗೆ ಚಿಂತೆಯಿಲ್ಲ. ಆದರೆ, ಪಾಕಿಸ್ತಾನದಿಂದ ಹೊರಬರುತ್ತಿರುವ ಭಯೋತ್ಪಾದನೆ ವಿರುದ್ಧ ಅವರ ರಕ್ಷಣಾ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಕ್ಟೋಬರ್​ನಲ್ಲಿ ನಡೆಯಲಿರುವ ಎಫ್‌ಎಟಿಎಫ್ (ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ) ಸಭೆ ಪಾಕ್​ಗೆ ನಿರ್ಣಾಯಕವಾಗಲಿದೆ ಎಂದರು.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ್ದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಸಾಕಷ್ಟು ಬಾರಿ ಈ ಕುರಿತು ಪ್ರಸ್ತಾಪಿಸಿತ್ತು. ಆದರೆ, ಈ ಬಾರಿ ಅದು ಕಠಿಣ ಮತ್ತು ವಿಭಿನ್ನ ನಿಲುವು ತೆಗೆದುಕೊಂಡಂತೆ ಕಾಣುತ್ತಿದೆ. ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅಮೆರಿಕ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ 'ಪ್ರಧಾನಿ ಭಾರತದ ಆಂತರಿಕ ವಿಷಯವಾದ ಕಾಶ್ಮೀರದ ಬಗ್ಗೆ ಮಾತನಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದರು. ಮೋದಿ ಹಾಗೆಯೇ ನಡೆದುಕೊಂಡು ಪರೋಕ್ಷವಾಗಿ ಪಾಕಿಸ್ತಾನದ ಒಳಗಿನ ಉಗ್ರವಾದವನ್ನು ಪ್ರಸ್ತಾಪಿಸಿದ್ದರು. ಪಾಕಿಸ್ತಾನ ಒಂದು ಅರ್ಥದಲ್ಲಿ ನಮಗಿಂತ ಹಿಂದುಳಿದ ದೇಶ ಎಂದರು.

ಇಸ್ಲಾಮಾಬಾದ್‌ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಭಾರತೀಯ ಹೈಕಮಿಷನರ್ ಶರತ್ ಸಭರ್​ವಾಲ್

ಪಾಕಿಸ್ತಾನದ ಪ್ರಧಾನಿ ಏನೇ ಹೇಳಿದರೂ ರಾಜತಾಂತ್ರಿಕ ಮಟ್ಟದಲ್ಲಿ ಭಾರತೀಯ ಹೈಕಮಿಷನ್‌ನ ಕಿರಿಯ ಅಧಿಕಾರಿಗಳು ತಕ್ಕ ಉತ್ತರ ನೀಡಲಿದ್ದಾರೆ. ಪ್ರಧಾನ ಮಂತ್ರಿ ನಮ್ಮನ್ನು ಕಾಡುತ್ತಿರುವ ಭಯೋತ್ಪಾದನೆ, ಅಭಿವೃದ್ಧಿ, ಹವಾಮಾನ ಬದಲಾವಣೆ ಮತ್ತು ಇಂಡೋ-ಪೆಸಿಫಿಕ್​ನಂತಹ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು ಮೆಚ್ಚುವಂಥದ್ದು.

ಚೀನಾ ಸಹಾಯದಿಂದ ಪಾಕ್ ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದೆ. ಇದರಿಂದ ಆ ದೇಶಕ್ಕೆ ಯಾವುದೇ ರೀತಿಯ ಫಲಿತಾಂಶ ದೊರೆತಿಲ್ಲ. ಪ್ರಯತ್ನ ಸಂಪೂರ್ಣವಾಗಿ ವಿಫಲವಾಗಿದೆ. ಎರಡನೇ ಅವಕಾಶ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿತ್ತು. ಅಲ್ಲಿಯೂ ಅವರು ಒಂದು ಹೇಳಿಕೆಯನ್ನಷ್ಟೆ ಕೊಟ್ಟರು. ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ತೆಗೆದುಹಾಕುವಂತೆ ಮಾನವ ಹಕ್ಕುಗಳ ಸಂಘಟನೆ ಭಾರತಕ್ಕೆ ತಿಳಿಸಿದೆ ಅಷ್ಟೇ ಎಂದು ಸಭರ್​ವಾಲ್ ಸ್ಪಷ್ಟನೆ ನೀಡಿದ್ರು.

ಭಾರತದ ವಿರುದ್ಧ ಪಾಕಿಸ್ತಾನ ಯುಎನ್​ನಲ್ಲಿ ಏನೇ ಆರೋಪ ಮಾಡಿದ್ರೂ ನಮ್ಮನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ಇಲ್ಲಿಯವರೆಗೆ ಕಾಶ್ಮೀರದಲ್ಲಿನ ಜನರ ಮೇಲೆ ಹೇರಲಾದ ನಿರ್ಬಂಧಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ರಿದು ಕೆಲವೇ ದಿನಗಳಲ್ಲಿ ಸರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

ಸಂಬಂಧಗಳು ಅತ್ಯಂತ ಕಷ್ಟಕರವಾದ ಸಂದರ್ಭಗಳಲ್ಲಿ ಮಾತುಕತೆಗೆ ಸ್ಥಾನವಿಲ್ಲ. ಬಾಲಾ​ಕೋಟ್‌ನಂತಹ ಅಗತ್ಯವಾದ ದಂಡನಾತ್ಮಕ ಕ್ರಮ ತೆಗೆದುಕೊಳ್ಳಬೇಕೇ ವಿನ: ಭಾರತ ಮಾತುಕತೆಗೆ ಮುಂದಾಗಬಾರದು. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂಬ ನಿಲುವು ಸರ್ಕಾರಕ್ಕಿದೆ. ದೇಶದ ಜನ ಕೂಡಾ ಇದನ್ನು ಒಪ್ಪಿಕೊಂಡಿದ್ದಾರೆ. ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್​ 370 ಹಿಂತೆಗೆತಕ್ಕೆ ಅಮೆರಿಕ, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಇತರೆ ಮೂರನೇ ರಾಷ್ಟ್ರಗಳ ಬೆಂಬಲ ಪಡೆಯಲು ತೆರೆಮರೆಯಲ್ಲಿ ಪಾಕ್​ ಪ್ರಯತ್ನ ನಡೆಸಿದ್ದು ಫಲಪ್ರದವಾಗಲಿಲ್ಲ. ಭಾರತ ತನ್ನ ನಿಲುವುನೊಂದಿಗೆ ಮುಂದುವರೆಯಿತು ಎನ್ನುತ್ತಾರೆ ಸಭರ್​ವಾಲ್.

ಭಾರತಕ್ಕಿದು ಆಂತರಿಕ ಸಮಸ್ಯೆ. ಆದರೆ, ಪಾಕ್ ಇದನ್ನು ಬಾಹ್ಯ ಸಮಸ್ಯೆಯನ್ನಾಗಿ ಪರಿವರ್ತಿಸಿದೆ. ಪಾಕಿಸ್ತಾನವು ಭಾರತದ ರಾಜಕೀಯದ ಕತ್ತು ಹಿಸುಕುವಿಕೆಯ ಹುನ್ನಾರ ಹೊಂದಿದೆ. ಭಾರತದ ಬಗೆಗಿನ ಹಗೆತನ ಉಳಿಸಿಕೊಳ್ಳುವ ಆಸೆ. ಜಾಗತಿಕ ರಾಜಕೀಯದಲ್ಲಿ ನಮಗೆ ಪ್ರಧಾನವಾದ ಸ್ಥಾನವಿದೆ. ಭಯೋತ್ಪಾದನೆಯ ಮೂಲಕ ಕಣಿವೆ ರಾಜ್ಯದಲ್ಲಿ ಅಸ್ಥಿರಗೊಳಿಸಿ ಬಲಿಷ್ಠ ಭಾರತೀಯ ಪಡೆಗಳನ್ನು ಕಟ್ಟಿಹಾಕುವುದೇ ಅದರ ಉದ್ದೇಶ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಅಮೆರಿಕಾಕ್ಕೆ ಭಾರತ- ಪಾಕ್​ ನಡುವಿನ ಸಂಬಂಧ ಒಂದು ವಿಧದಲ್ಲಿ ಹಗ್ಗದ ಮೇಲಿನ ನಡಿಗೆಯಾಗಿದೆ. ವ್ಯಾಪಾರದ ಸಮಸ್ಯೆಗಳ ಹೊರತಾಗಿಯೂ ಅದು ಭಾರತದೊಂದಿಗೆ ವೇಗವಾಗಿ ಸಂಬಂಧ ವೃದ್ಧಿಸಿಕೊಳ್ಳುತ್ತಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನದ ವಿಷಯದಲ್ಲಿ ಅದಕ್ಕೆ ಪಾಕಿಸ್ತಾನ ಬೇಕು. ಪಾಕಿಸ್ತಾನವನ್ನು ಚೀನಾದಿಂದ ಸ್ವಲ್ಪ ದೂರವಿರಿಸಲು ಅದು ಪ್ರಯತ್ನಿಸುತ್ತಿದೆ. ಆದರೆ, ಈ ವಿಷಯದಲ್ಲಿ ಅದು ಯಶಸ್ವಿಯಾಗದಿರಬಹುದು. ಅಮೆರಿಕದೊಂದಿಗೆ ತಮ್ಮ ಸಂಬಂಧ ವೃದ್ಧಿಸಿಕೊಳ್ಳುವ ಉದ್ದೇಶ ಇರಬಹುದು ಎಂದರು.

ಭಯೋತ್ಪಾದನೆ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ ಎಫ್‌ಎಟಿಎಫ್ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಚೀನಾ, ಟರ್ಕಿ ಮತ್ತು ಮಲೇಷ್ಯಾ ದೇಶಗಳು ಅಡ್ಡಿಯಾಗಬಹುದು. ಈ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಅವರಿಗೆ ಮೂರು ರಾಷ್ಟ್ರಗಳ ಬೆಂಬಲ ಅಗತ್ಯವಿದೆ. ಆಗ ಈ ದೇಶಗಳು ಬೆಂಬಲ ನೀಡುವ ಸಂಭವವಿದೆ ಎಂದರು.

ABOUT THE AUTHOR

...view details