ಕರ್ನಾಟಕ

karnataka

ಅತ್ಯಾಚಾರಿಗಳು ಕ್ಷಮಾದಾನಕ್ಕೆ ಅರ್ಹರೇ ಅಲ್ಲ: ರಾಷ್ಟ್ರಪತಿ ರಾಮನಾಥ್​ ಕೋವಿಂದ್​​

ಫೋಕ್ಸೋ ಕಾಯ್ದೆಯಡಿ ಶಿಕ್ಷೆಗೊಳಗಾಗುವ ಆರೋಪಿಗಳು ಯಾವುದೇ ಕಾರಣಕ್ಕೂ ಕ್ಷಮಾದಾನಕ್ಕೆ ಅರ್ಹರೇ ಅಲ್ಲ ಎಂದು ರಾಷ್ಟ್ರಪತಿ ರಾಮನಾಥ್​​ ಕೋವಿಂದ್​ ಅಭಿಪ್ರಾಯಪಟ್ಟರು.

By

Published : Dec 6, 2019, 5:54 PM IST

Published : Dec 6, 2019, 5:54 PM IST

President Ram Nath Kovind
ರಾಷ್ಟ್ರಪತಿ ರಾಮನಾಥ್​ ಕೋವಿಂದ್​​

ಸಿರೋಹಿ(ರಾಜಸ್ಥಾನ): ಅತ್ಯಾಚಾರಿಗಳು ಯಾವುದೇ ಕಾರಣಕ್ಕೂ ಕ್ಷಮೆಗೆ ಅರ್ಹರೇ ಅಲ್ಲ ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಹೇಳಿದ್ರು. ರಾಜಸ್ಥಾನದ ಸಿರೋಹಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ರು.

ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಭಾಷಣ
ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ ಫೋಕ್ಸೋ ಕಾಯ್ದೆ ಅಡಿಯಲ್ಲಿ ಶಿಕ್ಷೆಗೊಳಗಾಗುವ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಕ್ಷಮಾದಾನಕ್ಕೆ ಅವಕಾಶವೇ ಕೊಡಬಾರದು. ಇಂತಹ ಘಟನೆಗಳು ದೇಶಕ್ಕೆ ಮಾರಕ. ಅತ್ಯಾಚಾರಿ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸುವಂತೆ ರಾಷ್ಟ್ರಪತಿ ರಾಮನಾಥ್​​ ಕೋವಿಂದ್​​ರಿಗೆ ಕೇಂದ್ರ ಗೃಹ ಇಲಾಖೆ ಶಿಫಾರಸು ಮಾಡಿದೆ ಎಂದವರು ತಿಳಿಸಿದರು.

ಕ್ಷಮಾದಾನ ಅರ್ಜಿಗಳ ಕುರಿತು ಸಂವಿಧಾನಕ್ಕೆ ಕೆಲವು ಅಗತ್ಯ ತಿದ್ದುಪಡಿಯಾಗಬೇಕಿದೆ. ಈ ಸಂಬಂಧ ಸಂಸತ್​​ ಪುನರ್​​ ಪರೀಶೀಲನೆ ನಡೆಸಬೇಕೆಂದು ಹೇಳಿದರು.

ಈಗಾಗಲೇ ದೇಶದ ಗಮನ ಸೆಳೆದಿರುವ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ, ತೆಲಂಗಾಣ ಪಶುವೈದ್ಯೆ ಕೇಸ್​ ಹಾಗೂ ಉನ್ನಾವೋ ಪ್ರಕರಣದ ಬಗ್ಗೆ ರಾಷ್ಟ್ರಪತಿಗಳು ಕಳವಳ ವ್ಯಕ್ತಪಡಿಸಿದರು.

ABOUT THE AUTHOR

...view details