ಕೃಷ್ಣಾ:ಮದುವೆಯಾಗಿ ಎರಡು ವರ್ಷವಾದ್ರೂ ನಡೆಯದ ಫಸ್ಟ್ನೈಟ್ನಿಂದಾಗಿ ಮಹಿಳೆಯೊಬ್ಬಳು ಬೇಸತ್ತು ಗಂಡನ ವಿರುದ್ಧ ದೂರು ನೀಡಿರುವ ಘಟನೆ ಕೃಷ್ಣಾ ಜಿಲ್ಲೆಯ ಪೆನಮಲೂರಿನಲ್ಲಿ ನಡೆದಿದೆ.
ಸಂಸಾರಕ್ಕೆ ಕೆಲಸಕ್ಕೆ ಬಾರದ ವಿಷಯವನ್ನು ಮುಚ್ಚಿ ಆ ವ್ಯಕ್ತಿ ಜೊತೆಗೆ 2016ರಲ್ಲಿ ಮಹಿಳೆಯೊಬ್ಬಳು ಮದುವೆ ಮಾಡಿಸಿದ್ದಳು. ಆ ಸಮಯದಲ್ಲಿ ವರದಕ್ಷಿಣೆ ಅಂತಾ ಗಂಡನ ಕುಟುಂಬಸ್ಥರಿಗೆ 10 ಲಕ್ಷದ ಜೊತೆ ಬಂಗಾರವನ್ನೂ ಹೆಣ್ಣಿನ ಕಡೆಯವರು ಕೊಟ್ಟಿದ್ದರು.
ಗಂಡ ಯಾವುದೋ ಕಾರಣ ಹೇಳಿ ಫಸ್ಟ್ನೈಟ್ ಮುಂದಕ್ಕೆ ಹಾಕುತ್ತಿದ್ದ. ಎರಡು ವರ್ಷವಾದ್ರೂ ಫಸ್ಟ್ನೈಟ್ ಮುಂದಕ್ಕೆ ಹೋಗುತ್ತಲೇ ಇತ್ತು. ಇದರಿಂದ ಬೇಸತ್ತ ಹೆಂಡ್ತಿ ಗಂಡನಿಗೆ ಕೋಪದಿಂದ ಕೇಳಿದಾಗ ಅಸಲಿ ಸಂಗತಿ ಹೊರ ಬಂದಿದೆ.
ಹೌದು, ನಾನು ಸಂಸಾರಕ್ಕೆ ಉಪಯೋಗಕ್ಕೆ ಬಾರದ ವ್ಯಕ್ತಿ. ಇದಕ್ಕೆ ಚಿಕಿತ್ಸೆ ಪಡಿಯುತ್ತಿದ್ದೇನೆ ಎಂದು ಆತ ಹೆಂಡ್ತಿಗೆ ಹೇಳಿದ್ದಾನೆ. ಈ ವಿಷಯದ ಬಗ್ಗೆ ಮಾವ, ಅತ್ತೆಗೆ ಪ್ರಶ್ನಿಸಿದಾಗ ಕಿರುಕುಳ ನೀಡಲು ಆರಂಭಿಸಿದ್ದಾರೆ. ಇನ್ನಷ್ಟು ವರದಕ್ಷಿಣೆ ನೀಡುವಂತೆ ಪೀಡಿಸಲು ಆರಂಭಿಸಿದ್ದರು. ಇದರಿಂದ ಬೇಸತ್ತು ಮಹಿಳೆ ಪೆನಮಲೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.