ನವದೆಹಲಿ:ಪ್ರಧಾನಿ ಮೋದಿ ಬೀದಿ ದೀಪಗಳನ್ನು ಆರಿಸುವಂತೆ ಹಾಗೂ ಮನೆಯ ವಿದ್ಯುತ್ ಚಾಲಿತ ಉಪಕರಣಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿಲ್ಲ ಎಂದು ಕೇಂದ್ರ ಇಂಧನ ಇಲಾಖೆ ಸ್ಪಷ್ಟನೆ ನೀಡಿದೆ.
ಆಸ್ಪತ್ರೆಗಳ ಹಾಗೂ ಅಗತ್ಯ ಸೇವೆಗಳ ಉದ್ಯಮಗಳಲ್ಲೂ ಕೂಡಾ ವಿದ್ಯುತ್ ದೀಪಗಳು ಆಫ್ ಆಗುವುದಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಬೀದಿ ದೀಪಗಳನ್ನು ಆರಿಸದಂತೆ ಆದೇಶ ನೀಡಲಾಗುತ್ತದೆ ಎಂದು ಇಂಧನ ಇಲಾಖೆ ಭರವಸೆ ನೀಡಿದೆ.
ಕೆಲವರು ಒಂದೇ ಬಾರಿಗೆ ವಿದ್ಯುತ್ ದೀಪಗಳನ್ನು ಸ್ಥಗಿತಗೊಳಿಸುವ ಕಾರಣದಿಂದ ಗ್ರಿಡ್ ಮತ್ತು ವೋಲ್ಟೇಜ್ನಲ್ಲಿ ವ್ಯತ್ಯಾಸವಾಗುವುದು ಹಾಗೂ ವಿದ್ಯುತ್ ಉಪಕರಣಗಳ ಬಗ್ಗೆ ಹಾನಿಯಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರ ಇಂಧನ ಸಚಿವ ಡಾ.ನಿತಿನ್ ರಾವತ್ ಕೂಡಾ ಒಂದೇ ಬಾರಿಗೆ ವಿದ್ಯುತ್ ದೀಪಗಳನ್ನು ಆರಿಸುವುದರಿಂದ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗುತ್ತದೆ ಎಂದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಇಂಧನ ಇಲಾಖೆ ಇದೆಲ್ಲಾ ಸುಳ್ಳು ಎಂದಿದೆ.
ಪ್ರಧಾನಿ ಮೋದಿ ಏಪ್ರಿಲ್ 5ರಂದು 9 ಗಂಟೆ 9 ನಿಮಿಷಕ್ಕೆ ವಿದ್ಯುತ್ ದೀಪಗಳನ್ನು ಆರಿಸಿ, ಮೊಬೈಲ್ ಟಾರ್ಚ್ ಹಾಗೂ ಮೇಣದ ಬತ್ತಿಗಳನ್ನು ಹೊತ್ತಿಸಿ ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕೆಂದು ಪ್ರಧಾನಿ ಮೋದಿ ಮನವಿ ಮಾಡಿದ್ದರು.