ಮಹಾರಾಜಗಂಜ್ ( ಉತ್ತರ ಪ್ರದೇಶ ) : ಕೊರೊನಾ ಹರಡುವ ಭೀತಿಯಿಂದ ಸ್ವದೇಶಕ್ಕೆ ಮರಳಲು ನೇಪಾಳ ಗೃಹ ಇಲಾಖೆ ಅವಕಾಶ ನಿರಾಕರಿಸಿದ ಹಿನ್ನೆಲೆ ನೂರಾರು ನೇಪಾಳಿ ಕಾರ್ಮಿಕರು ಇಂಡೋ-ನೇಪಾಳ ಗಡಿಯಲ್ಲಿ ಪ್ರತಿಭಟನೆ ನಡೆಸಿದರು.
ಸ್ವದೇಶಕ್ಕೆ ಮರಳಲು ನೇಪಾಳ ಪ್ರಜೆಗಳಿಗೆ ಅವಕಾಶ ನಿರಾಕರಣೆ: ಇಂಡೋ- ನೇಪಾಳ ಗಡಿಯಲ್ಲಿ ಕಾರ್ಮಿಕರಿಂದ ಪ್ರತಿಭಟನೆ
ಕ್ವಾರಂಟೈನ್ ಮುಗಿಸಿ ಬಂದಿದ್ದೇವೆ ಎಂದರೂ ತಮ್ಮ ದೇಶದ ಪ್ರಜೆಗಳಿಗೆ ದೇಶದೊಳಗೆ ಪ್ರವೇಶಿಸಲು ನೇಪಾಳ ಗಡಿ ಭದ್ರತಾ ಪಡೆಗಳು ಅವಕಾಶ ನಿರಾಕರಿಸಿದ ಹಿನ್ನೆಲೆ ಉತ್ತರ ಪ್ರದೇಶದ ಮಹಾರಾಜಗಂಜ್ನ ಇಂಡೋ-ನೇಪಾಳ ಗಡಿಯಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಇಂಡೋ- ನೇಪಾಳ ಗಡಿಯಲ್ಲಿ ಕಾರ್ಮಿಕರಿಂದ ಪ್ರತಿಭಟನೆ
ಕಾರ್ಮಿಕರು ತಮ್ಮ ಕ್ವಾರಂಟೈನ್ ಅವಧಿ ಮುಗಿಸಿದ್ದೇವೆ ಎಂದು ಹೇಳಿದರೂ ನೇಪಾಳ ಭದ್ರತಾ ಪಡೆಗಳು ದೇಶ ಪ್ರವೇಶಿಸಲು ಅವಕಾಶ ನಿರಾಕರಿಸಿದವು. ಬಳಿಕ ಭಾರತೀಯ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಎಲ್ಲಾ ಕಾರ್ಮಿಕರನ್ನು ಮತ್ತೆ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದರು.
ಮೇ 31ರವರೆಗೆ ಲಾಕ್ ಡೌನ್ ವಿಸ್ತರಣೆಯಾದರೂ ಸಡಿಲಿಕೆ ಮಾಡುತ್ತಾ ಬರಲಾಗುತ್ತಿದೆ. ಆದರೆ, ಇಂಡೋ--ನೇಪಾಳ ಗಡಿಯಲ್ಲಿ ಮಾತ್ರ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ.